ಕೋಲಾರ: ರಾಮಭಕ್ತ, ಕೋಲಾರದ ಪಬ್ಲಿಕ್ ಹೀರೋ ಪಾಚಾಸಾಬ್‌ ಕನಸನ್ನು ಗ್ರಾಮಸ್ಥರು ನನಸು ಮಾಡುವ ಮೂಲಕ ಹಿಂದೂ -ಮುಸ್ಲಿಂ ಸಾಮರಸ್ಯ ಮೆರೆದಿರುವ ಘಟನೆ ಕೋಲಾರದಲ್ಲಿ ನಡೆದಿದೆ.ರಾಮಕೋಟಿ ಬರೆದು ಶ್ರೀರಾಮನ ಸನ್ನಿದಾನ ಭದ್ರಾಚಲಂಗೆ ರಾಮಕೋಟಿ ನಾಮವನ್ನು ಕೊಂಡೊಯ್ಯಬೇಕು ಎನ್ನುವ ಕನಸಿಗೆ ಗ್ರಾಮಸ್ಥರೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಜನಿಸಿ ಸುಮಾರು 20 ವರ್ಷಗಳ ಕಾಲ ರಾಮನ ಜಪ ಮಾಡುತ್ತಾ, ರಾಮನಾಮವನ್ನು ಕೋಟಿ ಸಾರಿ ಬರೆದ ಬಂಡಾರವನ್ನು ಗ್ರಾಮಸ್ಥರ ಸಹಕಾರದಿಂದ ಭದ್ರಾಚಲಂಗೆ ಸಮರ್ಪಿಸಲು ಪ್ರಯಾಣ ಬೆಳೆಸಿದರು.ನಿತ್ಯ ಶ್ರೀರಾಮನನ್ನೇ ಆರಾಧಿಸುತ್ತಿರುವ ಭಕ್ತನಾಗಿರುವ ಇವರು, ಶ್ರೀರಾಮ ನಾಮವನ್ನು ಕೋಟಿ ಸಾರಿ ಬರೆದು ರಾಮನ ಮೇಲೆ ಇದ್ದ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀರಾಮನ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿರುವ ಪಾಚಾಸಾಬ್ ಅವರು, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಮುಸ್ಲಿಂ ಸಮುದಾಯದ ಪಾಚಾಸಾಬಿ ಎಲ್ಲಾ ಜಾತಿ ಒಂದೇ ಎಂಬ ಭಾವನೆಯಿಂದ ಶ್ರೀರಾಮನನ್ನು ಆರಾಧಿಸುತ್ತಾ ರಾಮನಿಗೆ ಪರಮಭಕ್ತನಾಗಿದ್ದಾರೆ.ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಪಾಚಾಸಾಬ್‌ ಪಂಡಿತ ಪಾಚಾಸಾಬ್‌ ಎಂದೇ ಚಿರಪರಿಚಿತರು. ಕನ್ನಡದಲ್ಲಿ ಲೋವರ್ ಸೆಕೆಂಡರಿ ಪಾಸಾಗಿ, ಮೈಸೂರು ಮಹಾರಾಜರ ಕಾಲದಲ್ಲಿ ಕೋಲಾರ ಜಿಲ್ಲೆಯ ಜಕ್ಕರಸಕುಪ್ಪ, ರಾಮನಗರ ಜಿಲ್ಲೆಯ ಅಂಚೆಕೆಂಪನದೊಡ್ಡಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಪಾಧ್ಯಾಯರಾಗಿ ನಂತರ ಮುಖ್ಯೋಪಾಧ್ಯಾಯರಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ಆಂಧ್ರಪ್ರದೇಶದ ಭದ್ರಾಚಲಂ ಶ್ರೀರಾಮನ ಪರಮ ಭಕ್ತರಾಗಿರುವ ಪಾಚಾಸಾಬ್ ತಾಮ್ರದ ತಗಡು ಹಾಗೂ ಪುಸ್ತಕಗಳಲ್ಲಿ ರಾಮನಾಮಗಳನ್ನು ಬರೆಯಲು ಮುಂದುವರಿಸಿದರು. 97  ವರ್ಷ ವಯಸ್ಸಾದರೂ, ಪ್ರತಿದಿನ ನಮಾಜ್ ಮಾಡಿ, ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡುತ್ತಿದ್ದರು. ಇದನ್ನೂ ಓದಿ: ಹಿಜಬ್ ಧರಿಸಿ ಪರೀಕ್ಷೆಗೆ ಅವಕಾಶ- 7 ಮಂದಿ ಅಮಾನತುಇಂತಹ ಪಾಚಾ ಸಾಬಿ ಕನಸನ್ನು ಗ್ರಾಮಸ್ಥರು ನನಸು ಮಾಡಿದ್ದಾರೆ. ಮಿನಿ ಬಸ್ ಮಾಡಿ ಗ್ರಾಮಸ್ಥರು ಅವರೊಂದಿಗೆ ಭದ್ರಚಲಂಗೆ ತೆರಳಿದ್ದಾರೆ. ಪಾಚಾಸಾಬಿ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದ್ದಾರೆ.ರಾಮನಾಮವನ್ನು ಕೋಟಿ ಸಾರಿ ಬರೆದಿದ್ದು, ಅವುಗಳನ್ನು ಅವರ ಮನೆಯಲ್ಲಿ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಬಹು ವರ್ಷದ ಕನಸಾಗಿರುವ ರಾಮಕೋಟಿಯನ್ನು ಅಯೋಧ್ಯೆ ಅಥವಾ ಭದ್ರಾಚಲಂ ದೇವಸ್ಥಾನಕ್ಕೆ ತಲುಪಿಸಬೇಕು ಎನ್ನುವ ಬಯಕೆ ನನಸಾಗುತ್ತಿದೆ. ಇದನ್ನೂ ಓದಿ: ಮಾನವೀಯತೆ ಇರುವುದು ನಿಜವೇ? – ಸಿಎಂ ಕೇಜ್ರಿವಾಲ್‌ಗೆ ಅಗ್ನಿಹೋತ್ರಿ ಪ್ರಶ್ನೆSign in to your account
Username or Email Address


Password

 Remember Me


