ತಮ್ಮ ಔಟ್‍ ಫಿಟ್ ವಿಚಾರದಲ್ಲಿ ಸದಾ ಸುದ್ದಿ ಆಗುವ ನಟಿ ಉರ್ಫಿ ಜಾವೇದ್, ತಮ್ಮ ಡ್ರೆಸ್ ಗಳಿಂದಾಗಿಯೇ ಸಖತ್ ಟ್ರೋಲ್ ಆಗುತ್ತಾರೆ. ಈ ಹಿಂದೆ ‘ಬಟ್ಟೆ ಎಂದರೆ ನನಗೆ ಅಲರ್ಜಿ’ ಎಂದು ಸ್ಟೇಟ್ ಮೆಂಟ್ ಕೊಟ್ಟು ಕೆಲವರ ಕೆಂಗೆಣ್ಣಿಗೆ ಗುರಿಯಾಗಿದ್ದರು. ವಿವಾದ ಏನೇ ಆದರೂ, ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಇಷ್ಟದ ಬಟ್ಟೆ ಹಾಕಿಕೊಂಡು ಎಂಜಾಯ್ ಮಾಡುತ್ತಾರೆ ಈ ನಟಿ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರುಇದೀಗ ಮತ್ತೆ ತಮ್ಮ ಕಾಸ್ಟ್ಯೂಮ್ ಕಾರಣಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಅವರು, ತಮ್ಮದೇ ಫೋಟೋ ಇರುವ ಉಡುಪು ಧರಿಸಿ, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದಾರೆ. ಜಾವೇದ್ ತಮ್ಮದೇ ಫೋಟೋಗಳ ಪ್ರಿಂಟ್ ಬಳಸಿ, ಈ ಉಡುಪನ್ನು ತಯಾರಿಸಿದ್ದು, ಇದಕ್ಕೆ ಸ್ಫೂರ್ತಿ ಸೋಷಿಯಲ್ ಮೀಡಿಯಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?‘ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಡಿಸೈನ್ ನನಗೆ ಕಂಡಿತು. ತುಂಬಾ ಹಿಡಿಸಿತು. ನಾನೇಕೆ ಪ್ರಯತ್ನಿಸಬಾರದು ಅನಿಸಿ, ನನಗಿಷ್ಟವಾದ ಫೋಟೋವನ್ನು ಪ್ರಿಂಟ್ ಮಾಡಿಸಿ, ಈ ಉಡುಪು ಸಿದ್ಧಪಡಿಸಿದ್ದೇನೆ. ಹೇಗೆ ಫಲಿತಾಂಶ ಎಂದು ಅಭಿಮಾನಿಗಳನ್ನು ಕೇಳಿದ್ದಾರೆ ಉರ್ಫಿ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತುಸದಾ ಹಾಟ್ ಹಾಟ್ ಆಗಿಯೇ ಕಾಣಿಸಿಕೊಳ್ಳುವ ಉರ್ಫಿಗೆ ಬಟ್ಟೆ ಡಿಸೈನ್ ಮಾಡೋದು ಯಾರು ಎಂಬ ಚರ್ಚೆ ಕೂಡ ನಡೆದಿದೆ. ಕೆಲವರಂತೂ ಇನ್ನೂ ಮುಂದೆ ಹೋಗಿ, ಉರ್ಫಿಗೆ ಖರ್ಚಿಫಿನಷ್ಟು ಬಟ್ಟೆಯಾದರೆ ಸಾಕು, ಅತ್ಯುತ್ತಮ ಕಾಸ್ಟ್ಯೂಮ್ ರೆಡಿ ಮಾಡಬಹುದು ಎಂದು ಕಾಲೆಳೆದವರೂ ಇದ್ದಾರೆ. ಆದರೆ, ಉರ್ಫಿ ಮಾತ್ರ ಹೊಸ ಹೊಸ ಕಾಸ್ಟ್ಯೂಮ್ ಹಾಕಿಕೊಂಡು, ಬಿಂದಾಸ್ ಆಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾ ಬರುವ ಕಾಮೆಂಟ್ ಗಳನ್ನು ಓದಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.Sign in to your account
Username or Email Address


Password

 Remember Me


