ತುಮಕೂರು: ಬೆಳಿಗ್ಗೆಯಷ್ಟೇ ಆತ್ಮಹತ್ಯೆಗೆ ಶರಣಾಗಿರುವ ಶಂಕರಣ್ಣನ ಪತ್ನಿ ಮೇಘನಾ 4 ತಿಂಗಳ ಗರ್ಭಿಣಿಯಾಗಿದ್ದಾರೆ ಎನ್ನುವ ವಿಚಾರ ಖಚಿತ ಮೂಲಗಳಿಂದ ತಿಳಿದು ಬಂದಿದೆ.ಮೇಘನಾ ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ಮನೆಯಲ್ಲಿ ಖುಷಿ ಪಡಬೇಕಾದ ಈ ಸಂದರ್ಭದಲ್ಲಿ ಶಂಕರಣ್ಣನ ಅಗಲಿಕೆಯಿಂದ ಶೋಕಾಚರಣೆ ಮಾಡುವ ದುರ್ವಿಧಿ ಬಂದೊದಗಿದೆ ಎನ್ನಲಾಗಿದೆ. ಇದನ್ನೂ ಓದಿ: ಪತಿ ಶಂಕರಣ್ಣ ಸಾವಿಗೆ ಅತ್ತೆಯೇ ಕಾರಣ: ಪತ್ನಿ ಮೇಘನಾ ಆರೋಪ
ಘಟನೆ ಕುರಿತು ಮಾತನಾಡಿರುವ ಶಂಕರಣ್ಣ ಅವರ ತಾಯಿ ರಂಗಮ್ಮ, ಸೊಸೆ ದಿನಾಲೂ ಜಗಳ ಮಾಡುತ್ತಿದ್ದಳು, ಕಿರಿಕಿರಿ ಕೊಡುತ್ತಿದ್ದಳು, ಮಗನಿಗಿದ್ದ 3 ಎಕರೆ ಜಮೀನು ಮಾರಿ ಬೆಂಗಳೂರಿಗೆ ಹೋಗೋಣ ಅನ್ನುತ್ತಿದ್ದಳು ಎಂದು ಮೇಘನಾ ವಿರುದ್ಧ ಆರೋಪಿಸಿದ್ದಾರೆ. ಇದನ್ನೂ ಓದಿ: ಶಂಕರಣ್ಣನ ಬಳಿ ಹೋಗಿ ಮದುವೆ ಆಗ್ತೀರಾ ಎಂದು ಕೇಳಿದ್ದ ಮೇಘನಾಅತ್ತೆ-ಸೊಸೆ ನಡುವೆ ಜಗಳ ಇರಲಿಲ್ಲ. ಮೇಘನಾ ಒಂದೊಮ್ಮೆ ನಾನು ಮಾತನಾಡುವುದನ್ನು ರೆಕಾರ್ಡ್ ಮಾಡಿಕೊಳ್ಳಲು ತಮ್ಮನನ್ನು ಕರೆಸಿದ್ದರು. ನಾನು ಆಗ ಏನೂ ಮಾತನಾಡದೇ ಆಚೆಗೆ ಬಂದುಬಿಟ್ಟಿದ್ದೆ. ಆಗ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಮಗನಿಗೆ ವಿಷಯ ತಿಳಿಸಿದಾಗ, ನನ್ನ ತಮ್ಮನೊಂದಿಗೆ ಜಗಳ ಕಾದಿದ್ದಕ್ಕೆ ಏನಾಯ್ತು? ಎಂದು ಗದರಿದ್ದಳು. ಅಂದಿನಿಂದ ನನ್ನೊಂದಿಗೆ ಮಾತನಾಡುವುದನ್ನೂ ಬಿಟ್ಟು, ನನ್ನನ್ನು ಹೊರಹಾಕಿ – ಹೊರಹಾಕಿ ಎಂದು ಪೀಡಿಸುತ್ತಿದ್ದಳು. ಆದರೆ, ಮಗ ಮಾತ್ರ ನಾನು ನಮ್ಮಮ್ಮನನ್ನು ಬಿಟ್ಟು ಬರುವುದಿಲ್ಲ. ಇಲ್ಲಿಂದ ಆಚೆ ಬಂದರೆ ಸತ್ತು ಹೋಗುತ್ತೇನೆ ಎಂದು ಹೇಳಿದ್ದ ಎಂದು ಅಳಲು ತೋಡಿಕೊಂಡಿದ್ದಾರೆ.Sign in to your account
Username or Email Address


Password

 Remember Me


