ಮಂಡ್ಯ: ಕೊಂಡೋತ್ಸವ ನೋಡಲು ಮನೆಯ ಮೇಲೆ ಹತ್ತಿದ ಜನರಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದು, 25 ಮಂದಿಗೆ ಗಾಯವಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲ್ಗೇರೆಪುರದಲ್ಲಿ ಇಂದು ಬೆಳಗಿನ ಜಾವ ನಡೆಯುತ್ತಿದ್ದ ಗ್ರಾಮದೇವತೆ ಹಬ್ಬ ನಡೆಯುತ್ತಿತ್ತು. ಹಬ್ಬದ ಹಿನ್ನೆಲೆಯಲ್ಲಿ ಕೊಂಡೋತ್ಸವನ್ನು ಏರ್ಪಡಿಸಲಾಗಿತ್ತು. ಕೊಂಡೋತ್ಸವ ನೋಡಲು ಹಲವರು 25 ವರ್ಷದ ಹಳೆ ಮನೆ ಮೇಲೆ ಹತ್ತಿದರು. ಈ ವೇಳೆ ಮನೆಯ ಮೇಲ್ಛಾವಣಿ ಕಳಚಿ ಬಿದ್ದಿದೆ. ಇದನ್ನೂ ಓದಿ: ಆರೋಪ ಸಾಬೀತಾದರೆ ರಾಜಕೀಯ ತೊರೆಯುವೆ: ಹರೀಶ್ ರಾವತ್ಘಟನೆ ವೇಳೆ ಮನೆಯ ಮೇಲೆ ಇದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮಕ್ಕಳು ಸೇರಿದಂತೆ 25ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸ್ಮಾರ್ಟ್‍ಸಿಟಿ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಕಂಟಕSign in to your account
Username or Email Address


Password

 Remember Me


