ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಾರಿ ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಮಝರ್ ಅಹ್ಮದ್ ಎಂದು ಗುರುತಿಸಲಾಗಿದೆ. ಈತ ಈಚರ್ ಲಾರಿಯನ್ನೇ ಕದ್ದೊಯ್ದಿದ್ದನು. ಇದನ್ನೂ ಓದಿ: ಸ್ಮಾರ್ಟ್‍ಸಿಟಿ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಕಂಟಕಈ ಹಿಂದೆ ಸಣ್ಣ ಪುಟ್ಟ ವಾಹನಗಳನ್ನ ಕದಿಯುತ್ತಿದ್ದ ಮಝರ್, ಈ ಬಾರಿ ಲಾರಿಯನ್ನೇ ಕದ್ದು ಪರಾರಿಯಾಗಿದ್ದ. ಬೇರೆ ರಾಜ್ಯಗಳಲ್ಲಿ ನಂಬರ್ ಪ್ಲೇಟ್ ಚೇಂಜ್ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ. ಇತ್ತ ಲಾರಿ ಕದ್ದ ದೂರು ಬಂದ ಬಳಿಕ ಪೊಲೀಸರು ಸುಮಾರು 50ಕ್ಕೂ ಹೆಚ್ಚು ಸಿಸಿಟಿವಿಗಳನ್ನ ಫಾಲೋ ಮಾಡಿದರು. ಸಿಸಿಟಿವಿ ಮತ್ತು ನೆಟ್ವರ್ಕ್ ಆಧಾರದ ಮೇಲೆ ಆರೋಪಿಯನ್ನ ಬಂಧಿಸಿದ್ದಾರೆ.ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಲಾರಿಯನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊಂಡೋತ್ಸವ ನೋಡಲು ಮನೆ ಮೇಲೆ ಹತ್ತಿದ್ದ ಮಹಿಳೆ ಸಾವು, 25 ಮಂದಿಗೆ ಗಾಯSign in to your account
Username or Email Address


Password

 Remember Me


