ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಭಾರತದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದರು. ಈ ಸಿನಿಮಾಗಾಗಿ ಇಡೀ ಭಾರತೀಯ ಚಿತ್ರರಂಗ, ಅಭಿಮಾನಿ ಬಳಗ ಕಾಯುತ್ತಿದೆ. ಅದರಲ್ಲಿ ನಾನೂ ಒಬ್ಬ ಎಂದರು.ಬೆಂಗಳೂರಿನ ಒರಾಯನ್ ಮಾಲ್‍ನಲ್ಲಿ ಕೆಜಿಎಫ್-2 ಟ್ರೈಲರ್ ಲಾಂಚ್ ಇವೆಂಟ್ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ತಾರಾ ಬಳಗವೇ ಬಂದಿತ್ತು. ಈ ಕಾರ್ಯಕ್ರಮದ ಕೇಂದ್ರಬಿಂದು ರಾಕಿಬಾಯ್ ಯಶ್, ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಎಲ್ಲರಲ್ಲಿಯೂ ಹೆಚ್ಚು ಉತ್ಸಾಹ ಮೂಡಿಸಿತ್ತು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರುಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟ್ರೈಲರ್‌ನಲ್ಲಿದ್ದ ಯಶ್ ವೈಲನ್ಸ್… ವೈಲನ್ಸ್.. ಡೈಲಾಗ್ ಹೇಳಿ ಯಶ್, ಪ್ರಶಾಂತ್ ಸರ್, ಸಂಜಯ್ ದತ್ತ್ ಸರ್ ಸೂಪರ್ ಆಗಿ ಟ್ರೈಲರ್‌ ಬಂದಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.ನಂತರ ಮಾತನ್ನು ಮುಂದುವರಿಸಿದ ಅವರು, ನಿಜವಾಗಿ ಟ್ರೈಲರ್ ಸೂಪರ್ ಆಗಿತ್ತು. ಮೊದಲಿನಿಂದಲೂ ನನಗೆ ಯಶ್ ಕಂಡ್ರೆ ತುಂಬಾ ಇಷ್ಟ. ಅವರು ನೋಡಲು ತುಂಬಾ ಹ್ಯಾಂಡ್‍ಸಮ್ ಆಗಿ ಇದ್ದಾರೆ. ಯಶ್ ಸಿನಿಮಾ ನೋಡಲು ನಿಜಕ್ಕೂ ತುಂಬಾ ಖುಷಿಯಾಗುತ್ತೆ. ನಾವಿಬ್ಬರು ‘ತಮಸ್ಸು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಅಲ್ಲಿಂದ ಕೆಜಿಎಫ್ ಮೂಲಕ ಬೇರೆ ಲೆವೆಲ್‌ಗೆ ಬೆಳೆದಿದ್ದಾರೆ. ಅದರಲ್ಲಿಯೂ ಯಶ್, ರಾಧಿಕಾ ಅವರನ್ನು ಮದುವೆಯಾದ ಮೇಲೆ ಅದೃಷ್ಟ ಹೆಚ್ಚಾಗಿದೆ ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.ಇವರಿಬ್ಬರ ಜೋಡಿ ಕೂಡ ತುಂಬಾ ಚೆನ್ನಾಗಿದೆ. ನಾವು ಕುಟುಂಬದ ರೀತಿ ಇದ್ದೇವೆ. ಯಶ್ ನನ್ನ ತಮ್ಮನ ರೀತಿ. ರಾಧಿಕಾ ಸಹ ನಮ್ಮ ಫ್ಯಾಮಿಲಿಗೆ ತುಂಬಾ ಹತ್ತಿರ. ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್. ನಿಜವಾಗಿಯೂ ನಾನು ಎಪ್ರಿಲ್ 14ಕ್ಕೆ ಕಾಯುತ್ತೇನೆ. ಮೊದಲ ಶೋ ನೋಡುವೆ. ಅದು ಫ್ಯಾನ್ಸ್ ಜೊತೆ ನೋಡುತ್ತೇನೆ. ಅವನ ಸಿನಿಮಾ ನೋಡಲು ನಾನು ತುಂಬಾ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಟ್ರೈಲರ್ ಮೊದಲ ವಿಮರ್ಶೆ : ಹೇಗಿದೆ ರಾಕಿಭಾಯ್ KGF 2 ಹವಾSign in to your account
Username or Email Address


Password

 Remember Me


