ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆಗೆ ಆಗಮಿಸಿರುವ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಇಂದು ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಭೇಟಿ ಮಾಡಿದ್ದಾರೆ. ಅಪ್ಪು ಮನೆಯಲ್ಲೇ ರಾಘವೇಂದ್ರ ರಾಜ್ ಕುಮಾರ್ ಮತ್ತು ಕುಟುಂಬ ಸಂಜಯ್ ದತ್ ಅವರನ್ನು ಭೇಟಿ ಮಾಡಿದೆ.ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮತ್ತು ಮಕ್ಕಳಾದ ವಿನಯ್ ರಾಜ್ ಕುಮಾರ್ ಕೂಡ ಅಲ್ಲಿದ್ದರು. ಕೆಲ ಹೊತ್ತು ಪುನೀತ್ ಕುಟುಂಬದ ಯೋಗಕ್ಷೇತ್ರ ವಿಚಾರಿಸಿ ಮತ್ತೆ ಅವರು ಉಳಿದುಕೊಂಡಿರುವ ಹೋಟೆಲ್ ಗೆ ಆಗಮಿಸಿದರು ಸಂಜಯ್ ದತ್. ಇದನ್ನು ಓದಿ : ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರಕೆಜಿಎಫ್ 2 ಸಿನಿಮಾದ ಟ್ರೈಲರ್ ಇಂದು ಸಂಜೆ 6.40ಕ್ಕೆ ಯಶ್ ನಟನೆಯ ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಐದು ಭಾಷೆಗಳಲ್ಲಿ  ಸಿನಿಮಾ ಬಿಡುಗಡೆ ಆಗುತ್ತಿದ್ದು, ಹಾಗಾಗಿ ಐದು ಭಾಷೆಯಲ್ಲೂ ಏಕಕಾಲಕ್ಕೆ ಟ್ರೈಲರ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ತೆಲುಗಿನ ಖ್ಯಾತ ನಟ ರಾಮ್ ಚರಣ್ ತೇಜ ಕೆಜಿಎಫ್‍ 2 ತೆಲುಗು ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದರೆ, ತಮಿಳಿನ ಖ್ಯಾತ ನಟ ಸೂರ್ಯ ಕೆಜಿಎಫ್ 2 ತಮಿಳು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಕೆಜಿಎಫ್ 2 ಮಲಯಾಳಂ ಟ್ರೈರಲ್ ಅನ್ನು ಅಲ್ಲಿನ ಖ್ಯಾತ ನಟ ಪೃಥ್ವಿರಾಜ್ ರಿಲೀಸ್ ಮಾಡಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್ ಹೇಳಿದೆ.  ಈ ಟ್ರೈಲರ್ ರಿಲೀಸ್ ಅನ್ನು ವಿಶೇಷ ರೀತಿಯಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು, ಯಶ್ ಅಭಿಮಾನಿಗಳು ರಾಜ್ಯದ ನಾನಾ ಕಡೆ ಹಬ್ಬದಂತೆ ಆಚರಿಸುತ್ತಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾಹಾಗೆಯೇ ಹಿಂದಿಯಲ್ಲೂ ಈ ಟ್ರೈಲರ್ ಬಿಡುಗಡೆ ಆಗುತ್ತಿದ್ದು, ಅದನ್ನು ಬಾಲಿವುಡ್ ಖ್ಯಾತ ನಟ ಫರಾನ್ ಅಖ್ತರ್ ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ನಾಲ್ಕು ಟ್ರೈಲರ್ ಗಳನ್ನು ಯಾರೆಲ್ಲ ರಿಲೀಸ್ ಮಾಡಲಿದ್ದಾರೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಕನ್ನಡದ ಟ್ರೈಲರ್ ರಿಲೀಸ್ ಯಾರು ಮಾಡಲಿದ್ದಾರೆ ಎನ್ನುವ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. ಇವತ್ತು ಟ್ರೈಲರ್ ಬಿಡುಗಡೆಯ ಮುಖ್ಯ ಅತಿಥಿಗಳಾಗಿ ಶಿವರಾಜ್ ಕುಮಾರ್ ಮತ್ತು ಸಚಿವ ಅಶ್ವತ್ಥ್ ನಾರಾಯಣ ಭಾಗಿ ಆಗುತ್ತಿರುವುದರಿಂದ ಇವರೇ ಬಹುಶಃ ಟ್ರೈಲರ್ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ.Sign in to your account
Username or Email Address


Password

 Remember Me


