ವಿಜಯನಗರ: ಸದಾ ಕಾಲಾ ಒಂದಲ್ಲಾ ಒಂದು ಸಮಾಜಮುಖಿ ಸೇವೆ ಮಾಡುತ್ತಿರುವ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರನ್ನು ರಾಷ್ಟ್ರಪತಿ ಮಾಡುವಂತೆ ವಿಶೇಷಪೂಜೆಯನ್ನು ವಿಜಯನಗರದಲ್ಲಿ ಮಾಡಲಾಗಿದೆ.ಕೊರೊನಾ ಸಮಯದಲ್ಲಿ ಸಾಕಷ್ಟು ಬಡ ಜನರಿಗೆ ಸುಧಾಮೂರ್ತಿ ಅವರು ಸಹಾಯಹಸ್ತ ಚಾಚಿದ್ದರು. ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರಿಲ್ಲದೇ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟ ಪಡುತ್ತಿದ್ದ ಹಂಪಿಯಲ್ಲಿರುವ 1,500 ಗೈಡ್‍ಗಳ ಕುಟುಂಬಕ್ಕೆ ಆರ್ಥಿಕ ನೆರವೂ ನೀಡಿದ್ದರು. ಪರಿಣಾಮ ಅವರ ಹೆಸರಿನಲ್ಲಿ ದಕ್ಷಿಣ ಕಾಶಿ ವಿಶ್ವ ವಿಖ್ಯಾತ ಹಂಪಿಯ ಶ್ರೀವಿರೂಪಾಕ್ಷನಿಗೆ ರುದ್ರಾಭಿಷೇಕ ಪೂಜೆ ಮಾಡಲಾಗಿದೆ. ಇದನ್ನೂ ಓದಿ:  ನಾನು ಭಾರತ-ಪಾಕ್ ಎರಡರಲ್ಲೂ ಇಲ್ಲ: ಕಬೀರ್ ಖಾನ್ ಬೇಸರಹಂಪಿಯ ಶ್ರೀವಿರೂಪಾಕ್ಷ ದೇವರಿಗೆ ರುದ್ರಾಭಿಷೇಕ ಪೂಜೆ ಮಾಡಿ, ಸುಧಾಮೂರ್ತಿ ಅವರು ಆದಷ್ಟು ಬೇಗ ರಾಷ್ಟ್ರಪತಿ ಹುದ್ದೆ ಅಲಂಕಾರ ಮಾಡಲಿ ಎಂದು ಹಂಪಿಯ ಗುಡ್ ಮಾರ್ಗದರ್ಶಕರು ದೇವರಲ್ಲಿ ಹರಕೆ ಮಾಡಿಕೊಂಡಿದ್ದಾರೆSign in to your account
Username or Email Address


Password

 Remember Me


