ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ರಶ್ಮಿಕಾ ಮಂದಣ್ಣ ಯಾವತ್ತೂ ಮುಂದು. ದಿನವೂ ಅವರು ಹಲವು ಗಂಟೆಗಳ ಕಾಲ ಜಿಮ್ ನಲ್ಲಿ ಕಾಲಕಳೆಯುತ್ತಾರೆ. ಅದರಲ್ಲೂ ಡಾನ್ಸ್ ಮತ್ತು ಯೋಗದ ಮೂಲಕವೂ ದೇಹದಂಡಿಸುತ್ತಾರೆ. ಅನೇಕ ಬಾರಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜತೆ ಹಂಚಿಕೊಂಡು ಆರೋಗ್ಯದ ಬಗ್ಗೆ ಟಿಪ್ಸ್ ಕೊಡುತ್ತಾರೆ. ಆದರೆ, ಈ ಬಾರಿ ಅವರು ಕೊಂಚ ಭಯದಿಂದಲೇ ವರ್ಕೌಟ್ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಈ ಫೋಟೋ ನಿಮಗೆ ಇಷ್ಟವಾಗುತ್ತದೆಯೋ ಇಲ್ಲವೋ ಎಂದೂ ಕೇಳಿದ್ದಾರೆ. ಇದನ್ನು ಓದಿ : ಮತ್ತೆ ನಟನೆಗೆ ಮರಳಿದ ಮಾಲಾಶ್ರೀರಶ್ಮಿಕಾ ಮಂದಣ್ಣ ಹಾಟ್ ಹಾಟ್ ಆಗಿ ಮತ್ತು ತುಂಡುಡುಗೆ ತೊಟ್ಟಾಗೆಲ್ಲ ಟ್ರೋಲ್ ಆಗಿದ್ದಾರೆ. ಅನೇಕ ಬಾರಿ ಅವರು ಧರಿಸುವ ಕಾಸ್ಟ್ಯೂಮ್ ನಿಂದಾಗಿಯೇ ಸುದ್ದಿ ಆಗಿದ್ದಾರೆ. ಹಾಗಾಗಿ ಫೋಟೋ ಹಾಕುವಾಗ ಇದೀಗ ಯೋಚಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳದ್ದು. ಹೀಗಾಗಿಯೇ ಈ ಫೋಟೋವನ್ನು ಹಾಕುವುದೋ ಬೇಡವೋ ಗೊತ್ತಿಲ್ಲ ಎನ್ನುತ್ತಾ ಆ ಫೋಟೋ ಹಾಕಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾಜಿಮ್ ನಲ್ಲಿರುವ ಫೋಟೋ ಹಾಕಿಕೊಂಡು, ‘ನಿಮ್ಮಲ್ಲಿಯ ತುಂಬಾ ಜನರಿಗೆ ಈ ಫೋಟೋ ಇಷ್ಟವಾಗುವುದಿಲ್ಲ. ಆದರೆ, ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನಿರಂತರವಾಗಿ ವ್ಯಾಯಾಮ ಇರಲಿ. ಡಯಟ್, ವರ್ಕೌಟ್ ಮತ್ತು ಸಕಾರಾತ್ಮಕ ಆಲೋಚನೆಗಳಿಂದ ಉತ್ತಮ ಜೀವನ ನಡೆಸಬುದು’ ಎಂದು ಆರೋಗ್ಯದ ಕುರಿತಾಗಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆಪುಷ್ಪಾ ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ತಮಿಳು ಸಿನಿಮಾ ರಂಗದಲ್ಲಿ ಮತ್ತಷ್ಟು ಬೇಡಿಕೆ ಪಡೆದಿದ್ದಾರೆ. ಪುಷ್ಪಾ 2 ಸಿನಿಮಾದಲ್ಲೂ ಅವರಿಗೆ ಪ್ರಮುಖ ಪಾತ್ರವಿದ್ದು, ಸದ್ಯ ಆ ಸಿನಿಮಾದ ತಯಾರಿಯಲ್ಲಿ ಅವರು ತೊಡಗಿದ್ದಾರೆ ಎನ್ನಲಾಗುತ್ತಿದೆ.Sign in to your account
Username or Email Address


Password

 Remember Me


