ಚಿಕ್ಕಮಂಗಳೂರು: ಕಾಫಿ ನಾಡಿನ ಯುವಕ, ಯುವತಿಯರಿಗೆ ಗುಂಡಿ ರಸ್ತೆ ಕಂಟಕ ಎದುರಾಗಿದೆ. ಹೆಣ್ಣು ಕೊಡುತ್ತಿಲ್ಲ, ಗಂಡು ಬರುತ್ತಿಲ್ಲ, ಮದುವೆಯೂ ಆಗುತ್ತಿಲ್ಲ. ಜಿಲ್ಲಾ ಕೇಂದ್ರದಿಂದ 22 ಕಿ.ಮೀ. ದೂರದಲ್ಲಿರೋ ಕುಗ್ರಾಮ. ನೆಂಟರು, ಶಿಕ್ಷಕರು ಸೇರಿದಂತೆ ಬೇರೆ ಊರಿನ ಕೂಲಿ ಕಾರ್ಮಿಕರಿಗೂ ಆ ಊರು ಎಂದರೆ ಭಯ. ಆ ಊರಿನ ಯುವಕ-ಯುವತಿಯರಿಗೆ ಕಂಕಣ ಭಾಗ್ಯವಿಲ್ಲ. ವಧು-ವರರ ಕಡೆಯವರು ಬರುತ್ತಾರೆ, ನೋಡುತ್ತಾರೆ-ಹೋಗುತ್ತಾರೆ. ನಿಮ್ಮೂರಿಗೆ ಹೋಗೋಕೆ ಬೇರೆ ದಾರಿ ಇಲ್ವಾ ಅಂತಾರೆ. ರಸ್ತೆಯಿಂದ ಬದುಕಿನ ಸಂಬಂಧಗಳೇ ಮುರಿದು ಬೀಳುತ್ತಿವೆ.ಗುಂಡಿ ಬಿದ್ದ ರಸ್ತೆ, ದೊಡ್ಡ ಗಾತ್ರದ ಕಲ್ಲು, ಡಾಂಬರ್ ಕಾಣದ ರಸ್ತೆಗಳು. ಕಿತ್ತೋಗಿರುವ ರಸ್ತೆಗಳು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬೆರಣಗೋಡು ಗ್ರಾಮಕ್ಕೆ ಸೇರಿದ್ದು. ಈ ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳಿವೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 6 ಕಿಲೋ ಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬೈಕ್. ಕಾರು. ಜೀಪ್‍ಗಲಲ್ಲಿ ಹೋಗಬೇಕಾದ್ರೂ ಸರ್ಕಸ್ ತಪ್ಪಿದ್ದಲ್ಲ. ಇನ್ನು ನಡೆದು ಕೊಂಡು ಹೋದ್ರೂ ಡ್ಯಾನ್ಸ್ ಮಾಡಲೇಬೇಕು. ಈ ಊರಿಗೆ ಹೋಗ್ಬೇಕು ಎಂದರೆ ಆಟೋದವರು ಮುಲಾಜಿಲ್ಲದೆ ಬರಲ್ಲ ಅಂತಾರೆ. ಮೊದಲು 100-200ಕ್ಕೆ ಬರ್ತಿದ್ದ ಆಟೋ ಚಾಲಕರು ಈಗ 400-500 ಕೊಡುತ್ತೇವೆ ಎಂದರು ಬರಲ್ಲ ಎನ್ನುವಷ್ಟು ಪ್ರಮಾಣದಲ್ಲಿ ರಸ್ತೆ ಹಾಳಾಗಿದೆ.ಬೆರಣಗೋಡು ಗ್ರಾಮದ ಕೆಟ್ಟ ರಸ್ತೆಯಿಂದ ಗ್ರಾಮದ ಯುವಕ-ಯುವತಿಯರಿಗೆ ಮದುವೆಯೇ ಆಗುತ್ತಿಲ್ಲ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಮದುವೆ ವಯಸ್ಸಿಗೆ ಬಂದ ಯುವಕ-ಯುವತಿಯರಿದ್ದಾರೆ. ರಸ್ತೆ ಸರಿ ಇಲ್ಲ ಎನ್ನುವ ಕಾರಣಕ್ಕೆ ವಧು-ವರರ ಕಡೆಯವರು ಯಾರೂ ಬರುತ್ತಿಲ್ಲ. ಸಂಬಂಧಿಕರು ಸಹ ಗ್ರಾಮಕ್ಕೆ ಬರಲು ಹಿಂದೂ ಮುಂದೆ ನೋಡುತ್ತಿದ್ದಾರೆ. ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಹೀಗಾಗಿ ಜನರೇ ರಸ್ತೆಗೆ ಮಣ್ಣು ಹಾಕಿದರು ಆದರೆ ಅದು ಹಾಳಾಗಿದೆ.ಈ ಗ್ರಾಮ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಗೆ ಬರಲಿದೆ. ವಿಧಾನಸಭಾ ಕ್ಷೇತ್ರ ಮೂಡಿಗೆರೆಯದ್ದಾಗಿದ್ದು, ಹೀಗಾಗಿ ಯಾವ ಅಧಿಕಾರಿಗಳು ಆ ಬಗ್ಗೆ ಯೋಚನೆ ಕೂಡ ಮಾಡ್ತಿಲ್ಲ. ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ನೋ ಯೂಸ್. ವ್ಯವಸ್ಥೆಯ ಬೇಜವಾಬ್ದಾರಿಯಿಂದ ಬೇಸತ್ತಿರೋ ಹಳ್ಳಿಗರು ದಯವಿಟ್ಟು ನಮಗೊಂದು ರಸ್ತೆ ನಿರ್ಮಿಸಿಕೊಡಿ ಎಂದು ಮನವಿಕೊಂಡಿದ್ದಾರೆ.Sign in to your account
Username or Email Address


Password

 Remember Me


