ಹುಬ್ಬಳ್ಳಿ: ನನಗೆ ಹುಬ್ಬಳ್ಳಿ ಮಿರ್ಚಿ ಬಜ್ಜಿ ಬಹಳಷ್ಟು ಇಷ್ಟವಾಯಿತು. ಇಲ್ಲಿಂದ ನನ್ನ ಹೆಂಡತಿಗೂ ಪಾರ್ಸೆಲ್ ತೆಗೆದುಕೊಂಡು ಹೋಗುತ್ತೇನೆ ಎಂದು ಭಾರತೀಯ ಕ್ರಿಕೆಟ್ ತಂಡ ಮಾಜಿ ನಾಯಕ ಕಪಿಲ್ ದೇವ್ ತಿಳಿಸಿದರು.ಹುಬ್ಬಳ್ಳಿಯಲ್ಲಿ ನಡೆದ ಟೈಕಾನ್ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಳಿಗ್ಗೆಯಿಂದಲೂ ನನ್ನ ಜೊತೆ ಜನ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಪೋಟೋ ತೆಗೆದುಕೊಂಡು ಏನ್ ಮಾಡ್ತೀರಿ. ಬೇರೆಯವರಿಗೆ ತೋರಿಸಿಕೊಳ್ಳೋದಕ್ಕೆ ಪೋಟೋ ತೆಗೆದುಕೊಳ್ಳಬೇಡಿ. ಮೊದಲು ನಿಮ್ಮನ್ನು ನೀವು ಇಂಪ್ರೆಸ್ ಮಾಡಿ ಎಂದು ಯುವ ಜನರಿಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: ಕಾಫಿನಾಡಲ್ಲಿ ಆಪರೇಷನ್ `ಮೈಕ್’ ತೀರ್ಮಾನನಾನು ನೆಲ್ಸನ್ ಮಂಡೇಲಾರನ್ನು ಭೇಟಿಯಾಗಿದ್ದೆ. ಆಗ ನಾನು ಅವರ ಜೊತೆ ಪೋಟೋ ತೆಗೆಸಿಕೊಳ್ಳೋದು ಬಿಟ್ಟು ಐದು ನಿಮಿಷ ಮಾತನಾಡಿದೆ. ಅದೇ ನಂಗೆ ದೊಡ್ಡ ಮೆಮೋರಿಯಾಗಿತ್ತು. ನೀವು ಕೂಡಾ ಜನರನ್ನು ಭೇಟಿಯಾಗಿ, ಅವರಿಂದ ವಿಷಯ ತಿಳಿದುಕೊಳ್ಳಿ. ನಿಮ್ಮ ಮಿದುಳೇ ದೊಡ್ಡ ಕ್ಯಾಮೆರಾ. ಎಲ್ಲವೂ ಅಲ್ಲೇ ಸ್ಟೋರ್ ಆಗಿರುತ್ತದೆ. ನೀವು ಬೇಕಾದಾಗ ಅದನ್ನು ನೆನಪಿಸಿಕೊಳ್ಳಬಹುದು ಎಂದರು.Sign in to your account
Username or Email Address


Password

 Remember Me


