ಬೆಂಗಳೂರು: ಜಿಮ್‍ನಲ್ಲಿ ವರ್ಕೌಟ್‍ ಮಾಡುತ್ತಿರುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ.ವಿನಯಾಕುಮಾರಿ(44) ಜಿಮ್‍ನಲ್ಲಿ ಕುಸಿದು ಸಾವನ್ನಪ್ಪಿದ ಮಹಿಳೆ. ವಿನಯಾಕುಮಾರಿಗೆ ಮದುವೆ ಆಗಿರಲಿಲ್ಲ. ಜಿಮ್, ಡ್ಯಾನ್ಸ್ ಮಾಡ್ಕೊಂಡಿದ್ದರು. ಅವರು ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮಲ್ಲೇಶ್ ಪಾಳ್ಯದಲ್ಲಿರುವ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ, ಸಿದ್ದರಾಮಯ್ಯ ಧೋರಣೆ- ಬಿಜೆಪಿ ತಿರುಗೇಟುತಕ್ಷಣ ಅಲ್ಲಿದ್ದ ಸ್ಥಳೀಯರು ವಿನಯಾಕುಮಾರಿ ಅವರನ್ನು ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧಿಸಿ ಬೈಯ್ಯಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ – ಹೆಸರು ಬದಲಾಯಿಸುವಂತೆ ಕೊಲ್ಲೂರು ದೇವಾಲಯಕ್ಕೆ ಮನವಿSign in to your account
Username or Email Address


Password

 Remember Me


