ಉಡುಪಿ: ಬೆಳ್ಳಂಬೆಳಗ್ಗೆ ಉಡುಪಿ ನಗರದಲ್ಲಿ ಜೆಸಿಬಿಗಳ ಘರ್ಜನೆ ಶುರುವಾಗಿದ್ದು ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ. ಈ ತೆರವಿನ ಭಾಗವಾಗಿ ಹಿಜಬ್ ಹೋರಾಟದಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಝರಾ ನಿರ್ಮಿಸಿದ್ದ ಹೋಟೆಲನ್ನು ತೆರವು ಮಾಡಲಾಗುತ್ತಿದೆ.ನಗರಸಭೆ ಅಧಿಕಾರಿಗಳು ಜಾಮಿಯಾ ಮಸೀದಿ ಕಾಂಪ್ಲೆಕ್ಸ್‍ನಲ್ಲಿ ಬುಲ್ಡೋಜರ್ ಮೂಲಕವಾಗಿ ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ. ಉಡುಪಿ ನಗರಸಭೆ ಹಲವು ಬಾರಿ ಹೋಟೆಲ್‍ಗೆ ನೋಟಿಸ್ ನೀಡಿತ್ತು. ನಗರಸಭೆಯ ಸಭೆಯಲ್ಲಿ ಸಮಗ್ರ ಚರ್ಚೆ ಬಳಿಕ ಇಂದು ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು ಅಂಗಡಿಗಳ ತೆರವು ಮಾಡುತ್ತಿದ್ದಾರೆ.ಹಿಜಬ್ ಹೋರಾಟದಲ್ಲಿ ಎಸ್‍ಡಿಪಿಐ, ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದರು. ಇವರ ಝರಾ ಹೋಟೆಲ್ ಕಟ್ಟಡದಲ್ಲಿರುವ ಝೈತರ್ ಆನ್ ಎಂಬ ಮಳಿಗೆಯನ್ನೂ ತೆರವು ಮಾಡಲಾಡಗಿದೆ.






 Advertisement 




Sign in to your account
Username or Email Address


Password

 Remember Me


