ಬಹುಭಾಷಾ ನಟಿ ಹರಿಪ್ರಿಯಾ ತಮ್ಮ ಮುದ್ದು ನಟನೆ ಮೂಲಕ ಕನ್ನಡಿಗರ ಗಮನ ಸೆಳೆದಿದ್ದಾರೆ. ನಟನೆ ಜೊತೆಗೆ ಪ್ರಾಣಿಗಳ ಮೇಲೆ ಹೆಚ್ಚು ಕಾಳಜಿ ಇರುವ ಈ ನಟಿ ತಮ್ಮ ಮನೆಗೆ ಹೊಸದಾಗಿ ತಂದಿರುವ ಮುದ್ದು ಸದಸ್ಯನನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.ಪ್ರಾಣಿಗಳ ಜೊತೆ ಮನುಷ್ಯರ ಸಂಬಂಧ ಮೀರಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸ್ಪಂದಿಸುವ ಜೀವಗಳಾಗಿ ಈ ಮುದ್ದು ಪ್ರಾಣಿಗಳು ಮನುಷ್ಯರಲ್ಲಿ ಬೆರೆತು ಹೋಗಿರುತ್ತೆ. ಇದಕ್ಕೆ ಹರಿಪ್ರಿಯಾ ಸಹ ಹೊರತಲ್ಲ. ಅವರು ಎಲ್ಲೇ ಹೋದರು ಪ್ರಾಣಿಗಳ ಜೊತೆ ಕಾಲ ಕಳೆಯುತ್ತಾ ಇರುತ್ತಾರೆ. ಇದನ್ನೂ ಓದಿ: ಡ್ಯಾನ್ಸ್ ಮಾಸ್ಟರ್‌ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚMeet Crystal ????newest addition 2 our family,3.5 months old blue-eyed husky????Wn I was missing Lucky,Crystal came in home 2 months ago as a surprise gift☺️It’s as though I’m meeting Lucky all over again????He was also born on d same day as Lucky-Dec 6th!❤️Shower ur blessings 2 him ???? pic.twitter.com/BJSvcoDx0w— HariPrriya (@HariPrriya6) March 25, 2022ಈ ನಟಿ ತಮ್ಮ ಮನೆಗೆ ಹೊಸದಾಗಿ ಸೇರುತ್ತಿರುವ ಮುದ್ದು ಸದಸ್ಯನ ಬಗ್ಗೆ ಟ್ವಟ್ಟರ್‌ನಲ್ಲಿ, ಕ್ರಿಸ್ಟಲ್‍ನನ್ನು ಮೀಟ್ ಮಾಡಿ. ನಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ. 3.5 ತಿಂಗಳ ವಯಸ್ಸಿನ ನೀಲಿ ಕಣ್ಣಿನ ಹಸ್ಕಿ. ನಾನು ನನ್ನ ಲಕ್ಕಿಯನ್ನು ಕಳೆದುಕೊಂಡ ನಂತರ, ನಮ್ಮ ಮನೆಗೆ 2 ತಿಂಗಳ ಹಿಂದೆ ಸರ್ಪ್ರೈಸ್ ಗಿಫ್ಟ್ ಆಗಿ ಇವನು ಬಂದನು. ನಾನು ಮತ್ತೆ ನಿಮಗೆ ಲಕ್ಕಿಯನ್ನು ಭೇಟಿ ಮಾಡಿಸುತ್ತಿದ್ದೇನೆ. ಏಕೆಂದರೆ ಲಕ್ಕಿ ಕೂಡ ಡಿಸೆಂಬರ್ 6 ರಂದು ಜನಿಸಿದ್ದು, ಕ್ರಿಸ್ಟಲ್ ಸಹ ಅದೇ ದಿನ ಜನಿಸಿದ್ದಾನೆ. ನಿಮ್ಮ ಆಶೀರ್ವಾವಾದವನ್ನು ಕ್ರಿಸ್ಟಲ್‍ಗೆ ನೀಡಿ ಎಂದು ಬರೆದು ಫೋಟೋವನ್ನು ಟ್ವೀಟ್ ಮಾಡಿದ್ದಾರೆ.ಈ ಫೋಟೋದಲ್ಲಿ ಮುದ್ದು ಹಸ್ಕಿ ಕ್ಯಾಮರಾ ಕಡೆ ನೋಡುತ್ತಿದ್ದು, ಮುದ್ದಾಗಿ ಕಾಣಿಸುತ್ತಿದೆ. ಹರಿಪ್ರಿಯಾ ತಮ್ಮ ಮನೆಯಲ್ಲಿ ಸಾಕು ಪ್ರಾಣಿಗಳ ಜೊತೆ ಕಾಲಕಳೆಯುವ ವೀಡಿಯೋ ಮತ್ತು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅಲ್ಲದೆ ಶಿವರಾತ್ರಿ ಸಮಯದಲ್ಲಿ ಉಡುಪಿ ಮಠಕ್ಕೆ ಹೋಗಿದ್ದ ಈ ನಟಿ ಆನೆಗಳ ಜೊತೆ ಸಮಯ ಕಳೆದಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?ಹರಿಪ್ರಿಯಾ ತಮ್ಮ ಬೋಲ್ಡ್ ನಟನೆ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದರು ಪ್ರಸ್ತುತ ಯಾವುದೇ ಹೊಸ ಸಿನಿಮಾಗಳನ್ನು ಘೋಷಣೆ ಮಾಡಿಲ್ಲ.Sign in to your account
Username or Email Address


Password

 Remember Me


