ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತರಾಗಿರುವ ಪಂಡಿತ್ ಜಗನ್ನಾಥ್ ಗುರೂಜಿ ‘ಆರ್.ಆರ್.ಆರ್’ (RRR) ಸಿನಿಮಾದ ಬಗ್ಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಬಾಕ್ಸ್ ಆಫೀಸ್ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿರುವ ಇವರು, ಕೆಲವೇ ದಿನಗಳಲ್ಲಿ ಆರ್.ಆರ್.ಆರ್ ಸುತ್ತ ವಿವಾದ ಎದ್ದೇಳಬಹುದು ಎಂದು ಹೇಳುವ ಮೂಲಕ ಅಚ್ಚರಿಗೆ ದೂಡಿದ್ದಾರೆ.ಬಾಹುಬಲಿ ಸಿನಿಮಾ ರಿಲೀಸ್ ಆದಾಗ ಇದೇ ಜ್ಯೋತಿಷಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಅವರು ಹೇಳಿದ್ದ ಬಹುತೇಕ ಮಾತುಗಳು ನಿಜವೂ ಆಗಿದ್ದವು ಎನ್ನಲಾಗುತ್ತಿದೆ. ಹಾಗಾಗಿ ಆರ್.ಆರ್.ಆರ್ ಸುತ್ತ ಯಾವ ವಿವಾದ ಎದ್ದೇಳಬಹುದು ಎಂದು ತಲೆಕೆಡಿಸಿಕೊಂಡು ಕೂತಿದ್ದಾರೆ ರಾಜಮೌಳಿ‌ (S. S. Rajamouli) ಅಭಿಮಾನಿಗಳು. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್ಆರ್.ಆರ್.ಆರ್ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆಯೂ ಮಾತನಾಡಿರುವ ಜಗನ್ನಾಥ್ ಗುರೂಜಿ, ಈವರೆಗೂ ಭಾರತೀಯ ಸಿನಿಮಾ ರಂಗದ ಯಾವ ಚಿತ್ರವೂ ಮಾಡದಷ್ಟು ದುಡ್ಡನ್ನು ಈ ಚಿತ್ರ ಮಾಡಲಿದೆ ಎಂದು ನುಡಿದಿದ್ದಾರೆ. ದಾಖಲೆಯ ರೀತಿಯಲ್ಲಿ ರಾಜಮೌಳಿ ಟೀಮ್ ಗೆ ಹಣ ಹರಿದು ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್ಸಿನಿಮಾ ರಂಗದ ಅನೇಕರಿಗೆ ಈ ಗುರೂಜಿ ಭವಿಷ್ಯ ಹೇಳುತ್ತಾರೆ. ಅಲ್ಲದೇ, ಕೆಲ ಸಿನಿಮಾಗಳು ರಿಲೀಸ್ ಆದಾಗಲೂ ಇವರು ಮಾತನಾಡಿದ್ದಾರೆ. ಹಾಗಾಗಿ ಗುರೂಜಿ ಮಾತಿಗೆ ಮಹತ್ವ ಬಂದಿದೆ. ಯಾವ ರೀತಿಯಲ್ಲಿ ಈ ಸಿನಿಮಾ ಕಾಂಟ್ರವರ್ಸಿ ಆಗುತ್ತದೆ ಎಂಬ ಲೆಕ್ಕಾಚಾರ ಕೂಡ ತೆಲುಗು ಚಿತ್ರೋದ್ಯಮದಲ್ಲಿ ಶುರುವಾಗಿದೆ.Sign in to your account
Username or Email Address


Password

 Remember Me


