ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ಜಿಮ್ ಮಾಡುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲೇಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಫ್ಯಾಮಿಲಿ ಡಾಕ್ಟರ್ ಸಲಹೆ ಮೇರೆಗೆ ಶ್ರೀಮುರಳಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್ಪ್ರತಿನಿತ್ಯ ಜೀಮ್ ಮಾಡುವ ಸ್ಯಾಂಡಲ್ ವುಡ್ ಕಲಾವಿದರಲ್ಲಿ ಶ್ರೀಮುರಳಿ  ಕೂಡ ಒಬ್ಬರು. ನಿತ್ಯವೂ ಅವರು ಜಿಮ್ ನಲ್ಲಿ ಕಸರತ್ತು ಮಾಡುತ್ತಾರೆ. ಅದರಲ್ಲೂ ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿರುವ ‘ಬಘೀರ’ ಚಿತ್ರಕ್ಕಾಗಿ ದೇಹ ದಂಡಿಸಲೇಬೇಕಿದೆ. ಈ ಸಿನಿಮಾದ ತಯಾರಿಗಾಗಿ ಜಿಮ್ ನಲ್ಲಿ ಮತ್ತಷ್ಟು ಹೊತ್ತು ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲೇ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ : RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿನೆನ್ನೆಯಷ್ಟೇ ‘ನಟ ಭಯಂಕರ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಶ್ರೀಮುರಳಿ ಬಂದಿದ್ದರೂ, ನಡೆದಾಡೋಕೆ ಕಷ್ಟ ಪಡುತ್ತಿದ್ದರು. ಆಗಲೇ ಅವರಿಗೆ ಬ್ಯಾಕ್ ಪೇನ್ ಆಗಿರುವ ವಿಚಾರ ಬೆಳಕಿಗೆ ಬಂತು. “ಜಿಮ್ ಮಾಡುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿತು. ಅದಾದ ಎರಡು ದಿನಗಳ ಬಳಿಕವೂ ಬ್ಯಾಕ್ ಪೇನ್ ಕಡಿಮೆಯಾಗಿಲ್ಲ. ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಕುಟುಂಬದ ವೈದ್ಯರನ್ನು ಸಂಪರ್ಕಿಸಿದೆ. ಓಡಾಡಲು ಸ್ವಲ್ಪ ತೊಂದರೆ ಆಗುತ್ತಿದೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಫ್ಯಾನ್ಸ್ ಗಾಬರಿ ಪಡುವ ಅಗತ್ಯವಿಲ್ಲ” ಎಂದರು ಶ್ರೀಮುರಳಿ. ಇದನ್ನೂ ಓದಿ : RRR ಸಿನೆಮಾ ನೋಡಲು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರುಶ್ರೀಮುರಳಿ ಅವರು, ಸದ್ಯ ಬಘೀರ ಸಿನಿಮಾ ತಯಾರಿಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಬಘೀರ ಸಿನಿಮಾಗೆ ಚಾಲನೆ ಸಿಗಬೇಕಿತ್ತು. ಈಗ ನೋಡಿದರೆ ಶ್ರೀಮುರಳಿ ಅವರು ನೋವು ಮಾಡಿಕೊಂಡಿದ್ದಾರೆ. ಅವರು ವಿಶ್ರಾಂತಿ ಪಡೆದು,ಎಲ್ಲವೂ ಓಕೆ ಅಂದ ಬಳಿಕ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಬಘೀರ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಕಾರಣ,ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ. ಡಾ.ಸೂರಿ ನಿರ್ದೇಶಿಸುತ್ತಿದ್ದಾರೆ.Sign in to your account
Username or Email Address


Password

 Remember Me


