ಬೆಂಗಳೂರು: ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಒಂಟಿ ಕಳ್ಳಿಯೊಬ್ಬಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.ಜಯಂತಿ ಅಲಿಯಾಸ್ ಕುಟ್ಟಿಯಮ್ಮ ಬಂಧಿತ ಕಳ್ಳಿ. ಈಕೆ ನಗರದಲ್ಲಿ ಒಟ್ಟು 23 ಕಡೆ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದಾಳೆ. ಕಳ್ಳಿಯು ಮೊದಲಿಗೆ ಬೀಗ ಹಾಕಿದ್ದ ಮನೆಗಳನ್ನು ಗುರುತಿಸುತ್ತಿದ್ದಳು. ಬಳಿಕ ಒಂಟಿಯಾಗಿ ಮನೆಗಳಿಗೆ ಪ್ರವೇಶ ನೀಡಿ, ಮನೆ ಬಾಗಿಲಿನ ಬೀಗ ಒಡೆದು ಕಳ್ಳತನ ಮಾಡುತ್ತಿದ್ದಳು. ಇದನ್ನೂ ಓದಿ: ಬಹುಕಾಲದ ಗೆಳೆಯ ದೇವರಾಜ್ ಭೇಟಿಯಾಗಿ ಭಾವುಕರಾದ ಜಗ್ಗೇಶ್ಈಕೆ ಒಂದೇ ಏರಿಯಾದಲ್ಲಿ ಎರಡು ಕಳ್ಳತನ ಮಾಡಿದ್ದಳು. ಈ ವೇಳೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ವೇಳೆ ಇದು ಕಳ್ಳಿ ಜಯಂತಿ ಎಂಬುದು ಪತ್ತೆಯಾಗಿದೆ. ಜಯಂತಿಯನ್ನು ಬಂಧಿಸಿದ ನಂತರ ಮತ್ತೆ ಎರಡು ಹೊಸ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರುSign in to your account
Username or Email Address


Password

 Remember Me


