ಸ್ಯಾಂಡಲ್‍ವುಡ್‍ನ ನವರಸ ನಾಯಕ ಜಗ್ಗೇಶ್ ಬಹುದಿನಗಳ ನಂತರ ತಮ್ಮ ಆತ್ಮೀಯ ಗೆಳೆಯ ಡೈನಾಮಿಕ್ ಸ್ಟಾರ್ ದೇವರಾಜ್ ಅವರನ್ನು ಭೇಟಿ ಮಾಡಿದ್ದಾರೆ.ಕೊರೊನಾ ಲಾಕ್‍ಡೌನ್ ಕಾರಣದಿಂದಾಗಿ ಹಲವಾರು ತಿಂಗಳುಗಳ ಕಾಲ ಸ್ನೇಹಿತರು, ಆಪ್ತರು ಮತ್ತು ಸಂಬಂಧಿಕರಿಂದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಯಿತು. ಅದರಂತೆ ಸೆಲೆಬ್ರೆಟಿಗಳು ಕೂಡ ತಮ್ಮ ಆರೋಗ್ಯದ ದೃಷ್ಟಿಯಿಂದ ಕೋವಿಡ್ ಸಮಯದಲ್ಲಿ ಮನೆಯಲ್ಲಿಯೇ ಲಾಕ್ ಆಗಿದ್ದರು. ಇದೀಗ ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದು ಎಂದಿನಂತೆ ಜನಜೀವನ ಶುರುವಾಗಿದೆ. ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಜಗ್ಗೇಶ್ ಕೊಟ್ಟ ಡಿಫರೆಂಟ್ ಗಿಫ್ಟ್ಸದ್ಯ ಜಗ್ಗೇಶ್ ತಮ್ಮ ಬಹು ಕಾಲದ ಗೆಳೆಯ ದೇವರಾಜ್ ಅವರನ್ನು ಇಂದು ಭೇಟಿಯಾಗಿದ್ದು, ಇಬ್ಬರು ಒಟ್ಟಿಗೆ ಇರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕೋವಿಡ್ ಪ್ರಯುಕ್ತ ಅನೇಕ ಸ್ನೇಹಿತರ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆ ದುಃಖ ನನ್ನ ಬಹು ಕಾಡುತ್ತಿತ್ತು. ಈಗ ನೆಮ್ಮದಿಯಾಗಿ ಎಲ್ಲ ಸ್ನೇಹಿತರ ಭೇಟಿಮಾಡುತ್ತಿರುವೆ. 35 ವರ್ಷದ ಸ್ನೇಹಿತ ಕಲಾಬಂದು ದೇವರಾಜ್ ಭೇಟಿಮಾಡಿದ ಕ್ಷಣ. ಕನ್ನಡಕ್ಕೆ ಅದ್ಭುತ ನಟ ಕ್ಯಾಪ್ಷನ್ ಹಾಕಿದ್ದಾರೆ.  A post shared by ???????????????????????????? ???????????????????????????????????????????????????? (@actor_jaggesh)ಇತ್ತೀಚೆಗಷ್ಟೇ ಜಗ್ಗೇಶ್ ಮತ್ತು ಪರಿಮಳ ಅವರು ತಮ್ಮ 38ನೇ ವಿವಾಹ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ಅಲ್ಲದೇ ಜಗ್ಗೇಶ್ ಅವರು ವಿಶೇಷವಾದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ದಂಪತಿಯ ವಿವಾಹ ವಾರ್ಷಿಕೋತ್ಸವಕ್ಕೆ ಸ್ನೇಹಿತರು, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿತ್ತು. ಇದನ್ನೂ ಓದಿ: ನಟ ಧನುಷ್‍ ಖಾತೆಗಳನ್ನು ಅನ್ ಫಾಲೋ ಮಾಡಿದ ರಜನಿಕಾಂತ್ ಪುತ್ರಿ ಐಶ್ವರ್ಯಾSign in to your account
Username or Email Address


Password

 Remember Me


