ನಟ ಶಿವರಾಜ್ ಕುಮಾರ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಬೊಮ್ಮಾಯಿ ಅವರ ರೇಸ್‍ವೀವ್ ನಿವಾಸದಲ್ಲಿ ಭೇಟಿ ಮಾಡಿದ ಶಿವರಾಜ್ ಕುಮಾರ್, ‘ಜೇಮ್ಸ್’ ಸಿನಿಮಾದ ಕುರಿತಾಗಿ ಎದ್ದಿರುವ ಗೊಂದಲದ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಸಹೋದರ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾವನ್ನು ವೀಕ್ಷಿಸಲು ಆಹ್ವಾನ ಕೂಡ ನೀಡಿದ್ದಾರೆ. ಇದನ್ನೂ ಓದಿ : ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶಕೆಲವು ಕಡೆ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ‘ಜೇಮ್ಸ್’ ತಗೆದು, ಆ ಥಿಯೇಟರ್ ನಲ್ಲಿ ‘ದಿ ಕಾಶೀರ್ ಫೈಲ್ಸ್’ ಸಿನಿಮಾವನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸುದ್ದಿ ಆಗಿತ್ತು. ಹಲವು ಕಡೆ ಜೇಮ್ಸ್ ಚಿತ್ರಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ವತಃ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಹೇಳಿಕೊಂಡಿದ್ದರು. ಈ ವಿಷಯವನ್ನೂ ಮುಖ್ಯಮಂತ್ರಿಗಳ ಜತೆ ಶಿವರಾಜ್ ಕುಮಾರ್ ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್ನೆನ್ನೆಯಷ್ಟೇ ಜೇಮ್ಸ್ ಸಿನಿಮಾಗೆ ಯಾರೂ ತೊಂದರೆ ಮಾಡಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಪುನೀತ್ ಅವರ ಕೊನೆ ಸಿನಿಮಾವನ್ನು ಎಲ್ಲರೂ ವೀಕ್ಷಿಸಲು ಅವಕಾಶ ಸಿಗಬೇಕು ಎಂದಿದ್ದರು. ಈ ಮಾತಿನ ಬೆನ್ನಲ್ಲೆ ಸಿಎಂ ಮತ್ತು ಶಿವರಾಜ್ ಕುಮಾರ್ ಭೇಟಿ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ:  ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!ಸಿಎಂ ಭೇಟಿ ವೇಳೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್,  ಜೇಮ್ಸ್ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ನಿರ್ಮಾಪಕ ಶ್ರೀಕಾಂತ್ ಜತೆಯಿದ್ದರು. ಈ ವೇಳೆ ಸ್ವತಃ ಶಿವರಾಜ್ ಕುಮಾರ್ ಅವರು ಕಾರ್ ಡ್ರೈವ್ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.Sign in to your account
Username or Email Address


Password

 Remember Me


