ಬಾಲಿವುಡ್ ನ ಹೆಸರಾಂತ ನಟ, ಎವರ್ ಯಂಗ್ ಅನಿಲ್ ಕಪೂರ್ ತಾತನಾಗುತ್ತಿದ್ದಾರೆ. ಈ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕಾಗಿ ಅವರು ಪುತ್ರಿ ಮತ್ತು ಅಳಿಯನ ಫೋಟೋ ಬಳಸಿಕೊಂಡಿದ್ದಾರೆ. ಆ ಫೋಟೋ ಇದೀಗ ಅಭಿಮಾನಿಗಳ ಕಂಗೆಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ : ರಾಜಕೀಯ ದಾಳವಾದ ಪುನೀತ್ ನಟನೆಯ ‘ಜೇಮ್ಸ್’ ಚಿತ್ರಅನಿಲ್ ಕಪೂರ್ ಅವರ ಪುತ್ರಿ, ನಟಿ ಸೋನಮ್ ಕಪೂರ್ ಮತ್ತು ಅಳಿಯ, ಉದ್ಯಮಿ ಆನಂದ್ ಆಹೂಜಾ ಬೇಬಿ ಬಂಪ್ ರೀತಿಯ ಫೋಟೋಗಳನ್ನು ಶೂಟ್ ಮಾಡಿಸಿಕೊಂಡಿದ್ದಾರೆ. ಅವು ತೀರಾ ಖಾಸಗಿ ಕ್ಷಣಗಳಂತೆ ಕಾಣುವ ಭಂಗಿಗಳಲ್ಲಿವೆ. ಹಾಗೂ ಆ ಫೋಟೋದಲ್ಲಿ ನಟಿ ಸೋನಮ್ ಕಪೂರ್ ಮಲಗಿದ ರೀತಿಯ ಸರಿ ಕಂಡಿಲ್ಲ. ಇವೆಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಅಭಿಮಾನಿಗಳು ಅನಿಲ್ ಕಪೂರ್ ಅವರ ಕಿವಿಹಿಂಡಿದ್ದಾರೆ. ಇದನ್ನೂ ಓದಿ : ಸ್ವಂತ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಲು ಮುಂದಾದ ಹಿರಿಯ ನಟಿ ಲೀಲಾವತಿ: ಬಹುಪರಾಕ್ ಹೇಳಿದ ಕನ್ನಡ ಜನತೆ‘ತಾತಾ ಆಗುವುದು ಸಂಭ್ರಮದ ವಿಚಾರ. ಆದರೆ, ನೀವು ಆ ರೀತಿಯ ಫೋಟೋಗಳನ್ನು ಹಾಕಬಾರದಿತ್ತು. ಮುಂದೆ ಮತ್ತೆ ಈ ತಪ್ಪು ಮಾಡದಿರಿ’ ಎಂದು ಕೆಲ ಅಭಿಮಾನಿಗಳು ಪ್ರತಿಕ್ರಿಯೆ ಮಾಡಿದ್ದರೆ, ಇನ್ನೂ ಕೆಲ ಅಭಿಮಾನಿಗಳು ಸಿನಿಮಾ ಮತ್ತು ಬದುಕು ಎರಡೂ ಬೇರೆ ಬೇರೆ. ಇಲ್ಲಿ ಮಿಕ್ಸ್ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ : ಇಡೀ ಥಿಯೇಟರ್ ನಲ್ಲಿ ಒಬ್ಬರೇ ಕೂತು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿದ ಡೈಮಂಡ್ ರವಿಅನಿಲ್ ಕಪೂರ್ ನಾಲ್ಕು ಫೋಟೋಗಳನ್ನು ಹಂಚಿಕೊಂಡು ‘ನಾನು ನನ್ನ ಬದುಕಿನ ಅತ್ಯಂತ ರೋಚಕ ದಿನಕ್ಕಾಗಿ ಕಾದಿದ್ದೇನೆ. ತಾತನಾಗುತ್ತಿದ್ದೇನೆ. ಬದುಕು ಹೀಗೆಯೇ ಇರಲಾರದು. ಇಂಥದ್ದೊಂದು ಅವಕಾಶ ನೀಡಿದ್ದಕ್ಕೆ ಅಳಿಯ ಮತ್ತು ಮಗಳಿಗೆ ಧನ್ಯವಾದಗಳು’ ಎಂದು ಟ್ವಿಟರ್ ನಲ್ಲಿ ಅನಿಲ್ ಕಪೂರ್ ಬರೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


