ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರು ವಿವಿ 102ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ರಾಜ್ಯಪಾಲರಿಂದ ಈ ಗೌರವನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಇಂದು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪುನೀತ್ ಪತ್ನಿ ಅಶ್ವಿನಿ ಭಾವುಕರಾಗಿಯೇ ಪುನೀತ್ ಪರವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸಿದರು.ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್ ನಲ್ಲಿ ನಡೆಯುತ್ತಿರುವ ಗೌರವ ಡಾಕ್ಟರೇಟ್ ಪ್ರಧಾನ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಟುಂಬ ವರ್ಗದವರು ಹಾಜರಿದ್ದರು. ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ, ನಟ ವಿನಯ್ ರಾಜ್ ಕುಮಾರ್, ರಾಜ್ ಕುಮಾರ್ ಮಗಳು ಲಕ್ಷ್ಮಿ ಗೋವಿಂದು ಹಾಗೂ ಮೊಮ್ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ1976 ರಲ್ಲಿ ಡಾ. ರಾಜಕುಮಾರ್ ಗೆ ಮೈಸೂರು ವಿವಿಯಿಂದ ಡಾಕ್ಟರೇಟ್ ಗೌರವ ನೀಡಲಾಗಿತ್ತು. 2022 ರಲ್ಲಿ ಪುನೀತ್ ರಾಜಕುಮಾರ್ ಗೆ ಮರಣೋತ್ತರ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಪುನೀತ್ ಅವರ ಸಮಾಜಮುಖಿ ಕೆಲಸಗಳು ಮತ್ತು ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆಯನ್ನು ಆಧರಿಸಿ, ಮೈಸೂರು ವಿವಿ ಈ ಗೌರವನ್ನು ನೀಡಿದೆ.Sign in to your account
Username or Email Address


Password

 Remember Me


