ಮದುವೆ ವಿಷಯದಲ್ಲಿ ಅತೀ ಹೆಚ್ಚು ಸುದ್ದಿಗೆ ಸಿಕ್ಕ ನಟಿ ತಮಿಳಿನ ಸ್ಟಾರ್ ನಾಯಕಿ ನಯನತಾರಾ. ಪ್ರೀತಿಯ ವಿಷಯದಲ್ಲಿ ನಯನಾ ನತದೃಷ್ಟೆ. ಲವ್ ಫೆಲ್ಯುವರ್ ಅನ್ನುವುದು ಇವರ ಬಾಳಿನಲ್ಲಿ ಸಿನಿಮಾದಂತೆಯೇ ಬದಲಾಗುತ್ತಾ ಹೋದವು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮತ್ತೆ ನಯನತಾರಾ ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವ ವಿಷಯ ಗಾಸಿಪ್ ರೀತಿಯಲ್ಲಿ ಹರಿದಾಡುತ್ತಲೇ ಇರುತ್ತದೆ. ಈ ಬಾರಿ ಅದು ಸುಳ್ಳಾಗಲಿದೆ ಎನ್ನುವ ಮಾಹಿತಿ ಇದೆ.ನಯನತಾರಾ ಮತ್ತು ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಇಬ್ಬರೂ ಸಹಜೀವನ ನಡೆಸುತ್ತಿದ್ದಾರೆ ಎನ್ನುತ್ತಿದೆ ಟಾಲಿವುಡ್. ಮೂರ್ನಾಲ್ಕು ವರ್ಷಗಳಿಂದ ಅವರು ಒಟ್ಟಿಗೆ ಇದ್ದು, ಇದೀಗ ಮದುವೆ ಮಾಡಿಕೊಳ್ಳಲು ಸಿದ್ಧತೆ ಕೂಡ ನಡೆಸಿದ್ದಾರಂತೆ. ಸದ್ಯ ವಿಘ್ನೇಶ್ ಶಿವನ್ ನಿರ್ದೇಶನದ ‘ಕಾತು ವಾಕ್ಲೆ ರಾಂಡು’ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ನಂತರ ಇಬ್ಬರೂ ಹಸೆಮಣೆ ಏರಲಿದ್ದಾರಂತೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿಇಬ್ಬರೂ ಅನೇಕ ಬಾರಿ ಹೋಟೆಲ್, ದೇವಸ್ಥಾನ ಮುಂತಾದ ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದಿದೆ. ಅಲ್ಲದೇ, ತಾವು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎನ್ನುವ ಮಾಹಿತಿಯನ್ನೂ ಹಲವರಿಗೆ ನಯನತಾರಾ ಹೇಳಿಕೊಂಡಿದ್ದಾರೆ ಎನ್ನುವ ಸುದ್ದಿಯೂ ಆಗಿತ್ತು. ಮದುವೆ ವಿಷಯಕ್ಕೆ ಆ ಮಾತುಗಳೇ ಪುಷ್ಠಿ ನೀಡುತ್ತಿವೆ.ನಯನತಾರಾ ಪ್ರತಿಭಾವಂತ ನಟಿ. ಕನ್ನಡದಲ್ಲಿ ಅವರು ಉಪೇಂದ್ರ ಜತೆ ನಟಿಸಿದ್ದಾರೆ. ನಾಯಕರಷ್ಟೇ ನಯನತಾರಾ ಅವರಿಗೆ ಸಿನಿಮಾ ರಂಗದಲ್ಲಿ ವರ್ಚಸ್ ಇದೆ. ಹೀಗಾಗಿ ಆಗಾಗ್ಗೆ ಇವರ ಮದುವೆಯ ವಿಚಾರ ಮುನ್ನೆಲೆಗೆ ಬರುತ್ತದೆ. ಅಂದುಕೊಂಡಂತೆ ನಡೆದರೆ, ಇದೇ ವರ್ಷವೇ ಈ ಜೋಡಿ ಸಪ್ತಪದಿ ತುಳಿಯಲಿದೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್ಸದ್ಯ ನಯನತಾರಾ ‘ ಕಾತು ವಾಕ್ಲೆ ರಾಂಡು ಕಾತಲ್’ ಚಿತ್ರ ಬಿಡುಗಡೆ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ಸ್ವತಃ ವಿಘ್ನೇಶ್ ಶಿವನ್ ನಿರ್ದೇಶಿಸಿದ್ದಾರೆ. ವಿಜಯ್ ಸೇತುಪತಿ ಹಾಗೂ ಸಮಂತಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.Sign in to your account
Username or Email Address


Password

 Remember Me


