ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ವಿಧಾನಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ (Suraj Revanna) ವಿರುದ್ಧ ಮತ್ತೊಂದು ಎಫ್ಐಆರ್ (FIR) ದಾಖಲಾಗಿದೆ. ಜೂ.21 ರಂದು ಡಾ.ಸೂರಜ್‌ ಪರವಾಗಿ ದೂರು ಕೊಟ್ಟಿದ್ದ ಹೊಳೆನರಸೀಪುರ ಮೂಲದ ಯುವಕನೇ ಈಗ ಸೂರಜ್‌ ವಿರುದ್ಧವಾಗಿ ದೂರು ನೀಡಿದ್ದಾನೆ.ಕೆಲ ವರ್ಷಗಳ ಹಿಂದೆ ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಇಂದು ದೂರು ನೀಡಿದ್ದಾನೆ. ಸಂತ್ರಸ್ತನ ದೂರನ್ನು ಆಧಾರಿಸಿ ಸೂರಜ್‌ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506 ಅಡಿ ಎಫ್‌ಐಆರ್‌ ದಾಖಲಾಗಿದೆ. ಅರಕಲಗೂಡು ಮೂಲದ ಯುವಕನ ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು. ಕೊರೊನಾ (Covid) ಸಮಯದಲ್ಲಿ ತನ್ನ ಮೇಲೆ ಕೂಡ ಇದೇ ರೀತಿಯ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವನ್ನು ಸೂರಜ್‌ ಎಸಗಿದ್ದರು ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿದ್ದಾನೆ.Sign in to your account
Username or Email Address


Password

 Remember Me


