ಬೆಂಗಳೂರು: ನನ್ನ ಹನಿಟ್ರ್ಯಾಪ್ (Honey Trap) ನಡೆದಿಲ್ಲ. ಗೌರವಯುತವಾಗಿ ಬದುಕುತ್ತಿರುವ ನನ್ನ ಪರಿಚಿತರಿಗೆ ಹನಿಟ್ರ್ಯಾಪ್ ಮಾಡಿ, ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು ಎಂದು ಶಾಸಕ ಹರೀಶ್ ಗೌಡ  (MLA K Harish Gowda) ಸ್ಪಷ್ಟನೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು 2 ನಂಬರ್‍ಗಳಿಂದ ಕರೆ ಮಾಡ್ತಿದ್ರು. ಆ ನಂಬರ್‌ಗಳ ಮೂಲಕ ಟ್ರೇಸ್ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಆರೋಪಿಗಳ ವಿರುದ್ಧ ಕಾನೂನಾತ್ಮಕವಾಗಿ ಏನು ಆಗಬೇಕು ಅದು ಆಗುತ್ತದೆ. ಹಣಕ್ಕಾಗಿ ಬೇಡಿಕೆ ಇಟ್ಟು ಫೋಟೋ ಮನೆಗೆ ಕಳಿಸುವುದಾಗಿ ಬೆದರಿಸ್ತಿದ್ರು. ಈ ಜಾಲದಲ್ಲಿ ಯಾರಿದ್ದಾರೆ ಎಂಬುದನ್ನ ನೋಡಬೇಕು. ಉದ್ಯಮಿಗಳು, ಪ್ರೊಫೆಸರ್‍ಗಳಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನನಗೆ ಆ ರೀತಿ ಮಾಡಿಲ್ಲ ಆದರೆ ನನ್ನ ಕ್ಷೇತ್ರದ ಕೆಲವರಿಗೆ ಹಾಗಾಗಗಿದೆ ಎಂದು ಅವರು ತಿಳಿಸಿದ್ದಾರೆ.ಮೈಸೂರು, ಬೆಂಗಳೂರಿಗೆ ಬಂದಾಗ ಈ ರೀತಿ ಮಾಡುತ್ತಿದ್ದರು. ಈ ಸಂಬಂಧ ನಾನು ಅವರಿಂದ ಪೊಲೀಸ್ ಕಮಿಷನರ್‌ಗೆ, ಸಿಸಿಬಿ ಪೊಲೀಸರಿಗೆ ದೂರು ಕೊಡಿಸಿದ್ದೆ. ಬಂಧಿತರು ಮೈಸೂರಿನವರಾದ್ರೂ ನನಗೆ ಗೊತ್ತಿಲ್ಲ. ನನ್ನ ವಿರುದ್ದ ಯಾವುದೇ ರಾಜಕೀಯ ಷಡ್ಯಂತ್ರ ನಡೆದಿಲ್ಲ ಎಂದಿದ್ದಾರೆ.Sign in to your account
Username or Email Address


Password

 Remember Me


