ಸೋಷಿಯಲ್ ಮೀಡಿಯಾದ ಸ್ಟಾರ್ ಮತ್ತು ನಟಿ ಡಾಲಿ ಡಿಕ್ರೂಜ್ ಅಲಿಯಾಸ್ ಗಾಯತ್ರಿ ಮಾರ್ಚ್ 18ರಂದು ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಸ್ನೇಹಿತರ ಜೊತೆ ಹೋಳಿ ಪಾರ್ಟಿಗೆ ಎಂದು ಪಬ್ ವೊಂದಕ್ಕೆ ತೆರಳಿದ್ದ ಅವರು, ಅಲ್ಲಿಂದ ವಾಪಸ್ ಮನೆಗೆ ಬರುವಾಗ ಕಾರು ಅಪಘಾತವಾಗಿತ್ತು. ಚಾಲಕ ನಿಯಂತ್ರಣ ತಪ್ಪಿ ಫುಟ್ ಪಾತ್ ಮೇಲೆ ಹಾರಿದ್ದ ಕಾರು, ಈ ನಟಿಯ ಪ್ರಾಣ ತಗೆದಿತ್ತು. ಈ ಪ್ರಕರಣವನ್ನು ಬೆನ್ನುಹತ್ತಿದ್ದ ಪೊಲೀಸರಿಗೆ ಒಂದಷ್ಟು ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾಹೋಳಿ ಹಬ್ಬದ ದಿನ ಹೈದರಾಬಾದ್ ನಲ್ಲಿ ಮದ್ಯ ನಿಷೇಧವಾಗಿತ್ತು. ಹಾಗಾಗಿಯೇ ಇವರು ಮದ್ಯ ಕುಡಿಯಲೆಂದು ಉಪಾಯ ಮಾಡಿದ್ದು ಎಳನೀರನ್ನು. ಅದಕ್ಕೆ ಮಿಕ್ಸ್ ಮಾಡಿ ಗೊತ್ತಿಲ್ಲದಂತೆ ಗಾಯತ್ರಿ ಮತ್ತು ಅವರ ಜೊತೆ ಹೋಗಿದ್ದ ರೋಹಿತ್ ಗೆ ಕೊಟ್ಟಿದ್ದಾರೆ. ತಾವು ಎಷ್ಟು ಕುಡಿದಿದ್ದೇವೆ ಎಂದು ಅರಿಯದೇ ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ.ತಾನು ಮನೆಯಲ್ಲೇ ಹೋಳಿ ಹಬ್ಬ ಆಚರಿಸುವುದಾಗಿ ಗಾಯತ್ರಿ ಹೇಳಿದ್ದರೂ, ಒತ್ತಾಯ ಮಾಡಿ ರೋಹಿತ್ ಮತ್ತು ಸ್ನೇಹಿತರು ಆಕೆಯನ್ನು ಪ್ರಿಸ್ಮಾ ಎಂಬ ಪಬ್ ಗೆ ಕರೆದುಕೊಂಡು ಹೋಗಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಮನೆಯಲ್ಲೇ ಹಬ್ಬ ಆಚರಿಸಿದ್ದರೆ ಮಗಳ ಪ್ರಾಣ ಉಳಿಯತ್ತಿತ್ತು ಎಂದಿದ್ದಾರೆ ಕುಟುಂಬದ ಸದಸ್ಯರು. ಇದನ್ನೂ ಓದಿ : ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳುಗಾಯತ್ರಿ ಮತ್ತು ಸ್ನೇಹಿತರಿದ್ದ ಆ ಕಾರು ತುಂಬಾ ವೇಗವಾಗಿ ಚಲಿಸಿದೆ. ಫುಟ್ ಪಾತ್ ಗೆ ಢಿಕ್ಕಿ ಹೊಡೆದು, ಅಲ್ಲಿಂದ ಒಂದಷ್ಟು ಅಡಿ ಉರುಳುತ್ತಾ ಸಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೂ ತಾಗಿದೆ. ಆಕೆಯು ಕೂಡ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರಂತೆ.Sign in to your account
Username or Email Address


Password

 Remember Me


