ಬೆಂಗಳೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ರಾಜ್ಯದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಭಾರೀ ಸದ್ದು ಮಾಡುತ್ತಿದೆ. ಸದ್ಯ ವೀಕೆಂಡ್‍ನಲ್ಲಿ ಅಮೆರಿಕದಲ್ಲಿರುವ ಅಪ್ಪು ಅಭಿಮಾನಿಗಳು ಕಾರ್ ಜಾಥಾ ನಡೆಸಿದ್ದಾರೆ.ಪುನೀತ್ ಅವರು ಕರ್ನಾಟಕದಲ್ಲಿ ಮಾತ್ರವಲ್ಲದೇ ಹಲವಾರು ರಾಜ್ಯಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ಅಪ್ಪು ನಟಿಸಿರುವ ಜೇಮ್ಸ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ವಿದೇಶಗಳಲ್ಲಿಯೂ ಜೇಮ್ಸ್ ತೆರೆ ಕಂಡಿದ್ದು, ಅಭಿಮಾನಿಗಳನ್ನು ರಂಜಿಸುತ್ತಿದೆ. ಈ ನಡುವೆ ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಕನ್ನಡಿಗರು ವೀಕೆಂಡ್‍ನಲ್ಲಿ ಕುಟುಂಬ ಸಮೇತ ಕಾರ್ ಪರೇಡ್ ಮಾಡಿ ಸಂಭ್ರಮಿಸಿದ್ದಾರೆ. ಕಾರಿನ ಮೇಲೆ ಅಪ್ಪು ಫೋಟೋ ಮತ್ತು ಬ್ಯಾನರ್‍ಗಳನ್ನು ಹಾಕುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ: ಕಾಶ್ಮೀರ ಪಂಡಿತರ ಹತ್ಯಾಕಾಂಡ – ಎಸ್‌ಐಟಿ ತನಿಖೆಗೆ ನಿರ್ದೇಶನ ನೀಡಿ: ರಾಷ್ಟ್ರಪತಿಗಳಿಗೆ ಪತ್ರಮತ್ತೊಂದೆಡೆ ಕೆನಾಡದಲ್ಲಿ ಕೂಡ ಜೇಮ್ಸ್ ಸಿನಿಮಾ ಬಿಡುಗಡೆಗೊಂಡಿದ್ದು, ಅಪ್ಪು ಪೋಸ್ಟರ್‌ಗೆ ಅಭಿಮಾನಿಗಳು ಹೂಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಜೈಕಾರ ಘೋಷಿಸಿದ್ದಾರೆ. ಕೆನಡಾದಲ್ಲಿ ಜೇಮ್ಸ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಕರ್ನಾಟಕ ಮೂಲದ ಕೆನಡಾ ವಾಸಿ ಕಿರಣ್ ಅವರು ಡ್ರೀಮ್ಸ್ ಮೀಡಿಯಾ ಮೂಲಕ ಜೇಮ್ಸ್ ಸಿನಿಮಾವನ್ನು ಹಂಚಿಕೆ ಮಾಡಿದ್ದಾರೆ. ಇದನ್ನೂ ಓದಿ:  ಸಿಡಿ ಕೇಸ್ ಕ್ಲಿಯರ್ ಆಗುತ್ತೆ – ರಮೇಶ್ ಪರ ಸಹೋದರ ಬಾಲಚಂದ್ರ ಜಾರಕಿಹೊಳಿ ಬ್ಯಾಟಿಂಗ್






 Advertisement 




Sign in to your account
Username or Email Address


Password

 Remember Me


