ಬೆಂಗಳೂರು: ರಾಜ್ಯದಲ್ಲಿ ಇಂದು ನಿನ್ನೆಗಿಂತ 67 ಕೇಸ್ ಹೆಚ್ಚಳ ಕಂಡಿದೆ. ನಿನ್ನೆ ಒಟ್ಟು 106 ಕೇಸ್ ವರದಿಯಾಗಿತ್ತು. ಇಂದು ಒಟ್ಟು 173 ಕೇಸ್ ದಾಖಲಾಗಿದ್ದು, 2 ಮರಣ ಪ್ರಕರಣ ವರದಿಯಾಗಿದೆ.ಇಂದು ಬೆಂಗಳೂರಿನಲ್ಲಿ ಮತ್ತು ಬಳ್ಳಾರಿಯಲ್ಲಿ ತಲಾ ಒಂದೊಂದು ಮರಣ ಪ್ರಕರಣ ದಾಖಲಾಗಿದೆ. ಈ ಮೂಲಕ ಈವರೆಗೆ ಒಟ್ಟು ರಾಜ್ಯದಲ್ಲಿ 40,035 ಮರಣ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಒಟ್ಟು 138 ಪಾಸಿಟಿವ್ ಕೇಸ್ ಮತ್ತು 1 ಮರಣ ಪ್ರಕರಣ ವರದಿಯಾಗಿದೆ. ಒಟ್ಟು 15 ಜಿಲ್ಲೆಗಳಲ್ಲಿ ಶೂನ್ಯ ಪಾಸಿಟಿವ್ ಕೇಸ್ ವರದಿಯಾಗಿದೆ. ರಾಜ್ಯದ ಪಾಸಿಟಿವಿಟಿ ರೇಟ್ 0.56%ಕ್ಕೆ ಮತ್ತು ಮರಣ ಪ್ರಮಾಣ 1.15%ಕ್ಕೆ ಇಳಿಕೆ ಕಂಡಿದೆ. ಇದನ್ನೂ ಓದಿ: ಕೋಲಾರದ ಕ್ಲಾಕ್ ಟವರ್ ಮೇಲೆ 74 ವರ್ಷಗಳ ಬಳಿಕ ರಾರಾಜಿಸಿದ ತ್ರಿವರ್ಣ ಧ್ವಜರಾಜ್ಯದ ಉಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,011ಕ್ಕೆ ಇಳಿಕೆ ಕಂಡಿದೆ. ಒಟ್ಟು 153 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,44,605 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,02,497 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 78,351 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 30,718 ಸ್ಯಾಂಪಲ್ (ಆರ್‌ಟಿಪಿಸಿಆರ್ 24,552 + 6,166 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 138, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ಚಿತ್ರದುರ್ಗ 8, ದಕ್ಷಿಣ ಕನ್ನಡ 2, ದಾವಣಗೆರೆ 0, ಧಾರವಾಡ 1, ಗದಗ 0, ಹಾಸನ 0, ಹಾವೇರಿ 1, ಕಲಬುರಗಿ 1, ಕೊಡಗು 0, ಕೋಲಾರ 3, ಕೊಪ್ಪಳ 0, ಮಂಡ್ಯ 1, ಮೈಸೂರು 5, ರಾಯಚೂರು 0, ರಾಮನಗರ 1, ಶಿವಮೊಗ್ಗ 2, ತುಮಕೂರು 2, ಉಡುಪಿ 0, ಉತ್ತರ ಕನ್ನಡ 2, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


