‘RRR’ ಪ್ರೀ-ರಿಲೀಸ್ ಇವೆಂಟ್‍ನಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೆನೆದು ಮಾತನಾಡಿದ್ದಾರೆ. ಇವೆಂಟ್‍ನಲ್ಲಿ ಅವರು, ಅಪ್ಪು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಅವರ ಕಣ್ಣುಗಳು ನಮ್ಮನ್ನ ನೋಡುತ್ತಿವೆ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.ಅಪ್ಪು ‘ಜೇಮ್ಸ್’ ಸಿನಿಮಾ ರಿಲೀಸ್ ಮಾಡಿದಾಗಿನಿಂದಲ್ಲೂ ಜನರು ಅವರನ್ನು ನೆನಪಿಸಿಕೊಳ್ಳುತ್ತ ಸಿನಿಮಾ ನೋಡುತ್ತಿದ್ದಾರೆ. ರಿಲೀಸ್ ಆಗಿ ಮೂರು ದಿನದಲ್ಲಿ ಜೇಮ್ಸ್ ವಿದೇಶದಲ್ಲಿಯೂ ಬಾರಿ ಸದ್ದು ಮಾಡುತ್ತಿದೆ. ಇದನ್ನು ನೆನಪಿಸಿಕೊಂಡ ಶಿವಣ್ಣ RRR ಸಿನಿಮಾಗೆ ಶುಭ ಕೋರಿ ಮಾತನಾಡಿದ್ದು, ನನಗೆ ತುಂಬಾ ಸಂತೋಷ ಆಗುತ್ತಿದೆ. ಜೊತೆಯಲ್ಲಿ ಸ್ವಲ್ಪ ದುಃಖನೂ ಇದೆ. ಅಪ್ಪುನ ಕಳೆದುಕೊಂಡು ನಾವೆಲ್ಲಾ 4 ತಿಂಗಳಿಂದ ದುಃಖದಲ್ಲೇ ಇದ್ದೀವಿ. ನಮ್ಮ ದುಃಖದಲ್ಲಿ ಇಡೀ ಭಾರತೀಯ ಚಿತ್ರರಂಗ, ಸರ್ಕಾರ ಇದೆ ಎಂದರು.  ಇದನ್ನೂ ಓದಿ: ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್ಸಿಎಂ ಬೊಮ್ಮಾಯಿ ಅವರು ಅಣ್ಣನ ಸ್ಥಾನದಲ್ಲಿ ನಿಂತು ನಮ್ಮಷ್ಟೇ ದುಃಖ ಅವರಿಗೂ ಆಗಿದೆ. ರಾಮ್‍ಚರಣ್ ಹಾಗೂ ಎನ್‌ಟಿಆರ್‌ ಬಂದು ನಾವು ನಿಮ್ಮವರೆ ಅಂದಾಗ ತುಂಬಾ ಹೆಮ್ಮೆ ಅನಿಸುತ್ತೆ. ಅಪ್ಪುನಾ ನಾನು ಇವರಲ್ಲಿ ಕಾಣುತ್ತೇನೆ ನಿಮ್ಮಲ್ಲಿ ಕಾಣುತ್ತೇನೆ. ಅಪ್ಪು ಎಲ್ಲಿಗೂ ಹೋಗಿಲ್ಲ ಅವರ ಕಣ್ಣುಗಳು ನೋಡುತ್ತಿವೆ. ನಮ್ಮ ಮನಸ್ಸಲ್ಲಿ ನಿಮ್ಮ ಮನಸ್ಸುಗಳಲ್ಲಿ ಪ್ರತಿಯೊಬ್ಬರ ಮನಸ್ಸಲ್ಲೂ ಅಪ್ಪು ಇದ್ದಾರೆ ಎಂದು ದುಃಖಿತರಾದರು.Sign in to your account
Username or Email Address


Password

 Remember Me


