ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತು ದಕ್ಷಿಣ ಭಾರತದ ಹೆಸರಾಂತ ನಟ ಪ್ರಕಾಶ್ ರೈ ಸರಣಿಯ ಟ್ವಿಟ್ ಮಾಡುತ್ತಿದ್ದಾರೆ. ಈ ಮೊದಲು ಅವರು ಸಿನಿಮಾದ ಕುರಿತಾಗಿ ಟ್ವೀಟ್ ಮಾಡಿ ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಗಾಯ ಕೆದರುತ್ತಿದೆಯೋ, ವಾಸಿ ಮಾಡುತ್ತದೆಯೋ ಅಥವಾ ದ್ವೇಷವನ್ನು ಹರಡುತ್ತಿದೆಯೋ?’ ಎಂದು ಪ್ರಶ್ನೆ ಮಾಡಿದ್ದರು. ಈಗ ಯಾವೆಲ್ಲ ಫೈಲ್ಸ್ ಸಿನಿಮಾ ಆಗಬೇಕಿವೆ ಎಂದು ಸಿನಿಮಾದ ಶೀರ್ಷಿಕೆ ಸಮೇತ ಟ್ವಿಟ್ ಮಾಡಿದ್ದಾರೆ. ಅಲ್ಲದೇ ವ್ಯಂಗ್ಯವಾಗಿ “ನಿರ್ಮಾಪಕರಾಗಿ ಬದಲಾದ ಸುಪ್ರೀಮ್ ನಟರೆ, ಈ ಫೈಲ್ಸ್ ಗಳಿಗೂ ತಿರುವುಗಳನ್ನು ಕೊಟ್ಟು, ಸಿನಿಮಾ ರಿಲೀಸ್ ಮಾಡಿ” ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ : ನವೀನ್ ಸಜ್ಜು ಹೀರೋ: ಯಾರಿವ ಮುತ್ತು ವಿತ್? Exclusive Photosಈ ಹಿಂದೆ ಟ್ವೀಟ್ ಮಾಡಿದ್ದಾಗ ಅದು ಸಿನಿಮಾ ತಂಡಕ್ಕೋ ಅಥವಾ ಬಿಜೆಪಿ ಪಕ್ಷಕ್ಕೋ ಎಂದು ಗೊಂದಲವಿತ್ತು. ಆದರೆ, ಇಲ್ಲಿ ಅವರು ‘ಸುಪ್ರೀಂ’ ಪದವನ್ನು ಬಳಸಿದ್ದರಿಂದ ನೇರವಾಗಿ ಪ್ರಧಾನಿ ನರೇಂದ್ರ ಮೋದಿವರಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ.Dear supreme Actor turned Producer.. will you arm twist these files too .. and release them #justasking pic.twitter.com/IuiEslWidB— Prakash Raj (@prakashraaj) March 19, 2022ಪ್ರಕಾಶ್ ರೈ ಪ್ರಕಾರ ಯಾವೆಲ್ಲ ಸಿನಿಮಾಗಳು ಬರಬೇಕು ಅಂದರೆ, ಅವರೇ ಟ್ವಿಟರ್ ಖ್ಯಾತೆಯಲ್ಲಿ ಚಿತ್ರ ಸಹಿತ ಹೇಳಿಕೊಂಡಂತೆ ‘ಗೋಧ್ರಾ ಫೈಲ್’, ‘ಡೆಲ್ಲಿ ಫೈಲ್’, ‘ಜಿಎಸ್ಟಿ ಫೈಲ್’, ‘ಡಿ ಮಾನಿಟೇಷನ್ ಫೈಲ್’, ‘ಕೋವಿಡ್ ಫೈಲ್ಸ್’, ‘ಗಂಗಾ ಫೈಲ್ಸ್’ ಹೀಗೆ ಆರು ಸಿನಿಮಾಗಳು ನಿಮ್ಮ ನಿರ್ಮಾಣದಲ್ಲಿ ಮೂಡಿ ಬರಲಿ ಎಂದು ಕೇಳಿದ್ದಾರೆ.‘ದಿ ಕಾಶ್ಮೀರ್ ಫೈಲ್ಸ್’ ಚಿತ್ರತಂಡವು ಈ ಸಿನಿಮಾ ನೂರು ಕೋಟಿ ಕ್ಲಬ್  ಸೇರಿರುವ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿದೆ. ಸಕ್ಸೆಸ್ ಮೀಟ್ ಗಳನ್ನು ಆಯೋಜನೆ ಮಾಡಲಾಗುತ್ತಿದೆ. ಆದರೆ, ದಿನಗಳದಂತೆ ಈ ಸಿನಿಮಾವನ್ನು ವಿರೋಧಿಸುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಅಲ್ಲದೇ, ನೇರವಾಗಿ ಸಿನಿಮಾ ತಂಡದೊಂದಿಗೆ ಸಂವಾದಿಸುವ ಬದಲು, ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿಕೊಂಡು ಪ್ರಶ್ನೆಗಳನ್ನು ಕೇಳಲಾಗುತ್ತಿದೆ.Sign in to your account
Username or Email Address


Password

 Remember Me


