ಕನ್ನಡದ ಕಾರ್ಯಕ್ರಮಗಳಲ್ಲೂ ಇಂಗ್ಲಿಷ್ ಮಾತನಾಡಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗುತ್ತಿರುವ ರಶ್ಮಿಕಾ ಮಂದಣ್ಣ ಈಗ ಮತ್ತೆ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ. ಅಲ್ಲದೇ, ಅಪ್ಪು ಅಭಿಮಾನಿಗಳು ಕೂಡ ಕರ್ನಾಟಕದಿಂದ ‘ಬೈಕಾಟ್ ರಶ್ಮಿಕಾ’ ಎಂದು ಹ್ಯಾಷ್ ಟ್ಯಾಗ್ ಹಾಕಿ ವಿರೋಧ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ದಾಖಲೆ ಬರೆದ ಜೇಮ್ಸ್ – ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಪುನೀತ್ ಚಿತ್ರಕನ್ನಡದಿಂದ ನೆರೆ ರಾಜ್ಯಕ್ಕೆ ಹೋದ ರಶ್ಮಿಕಾಗೆ ಬ್ರೇಕ್ ನೀಡಿದ್ದು ಕನ್ನಡ ಚಿತ್ರರಂಗ. ಪುನೀತ್ ಅವರ ಜತೆ ಅಂಜನೀಪುತ್ರ ಸಿನಿಮಾದಲ್ಲೂ ರಶ್ಮಿಕಾ ನಟಿಸಿದ್ದಾರೆ. ಮಾರ್ಚ್ 17 ರಂದು ಕೇವಲ ಕನ್ನಡ ಚಿತ್ರರಂಗದ ನಟ ನಟಿಯರು ಮಾತ್ರವಲ್ಲ, ನೆರೆಯ ತಮಿಳುನಾಡು, ಆಂಧ್ರ ಮತ್ತು ಕೇರಳ ಚಿತ್ರರಂಗದ ದಿಗ್ಗಜರು ಕೂಡ ಪುನೀತ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಕನ್ನಡದವರೇ ಆದ ರಶ್ಮಿಕಾ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ. ಹಾಗಾಗಿ ಸಹಜವಾಗಿಯೇ ಅಪ್ಪು ಇಷ್ಟಪಡುವವರು ರಶ್ಮಿಕಾ ಅವರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ: ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆರಶ್ಮಿಕಾ ಮಂದಣ್ಣ ಈ ರೀತಿ ಮಾಡುತ್ತಿರುವುದು ಮೊದಲೇನೂ ಅಲ್ಲ. ಕನ್ನಡ ಸಿನಿಮಾಗಳ ಪ್ರಮೋಷನ್ ಗೆ ಸಿಗಲ್ಲ ಎಂದು ವಿವಾದ ಮಾಡಿಕೊಂಡಿದ್ದರು. ಕನ್ನಡದಲ್ಲಿ ಮಾತನಾಡಿಸಿದರೂ, ಅವರು ಕೊಡುವ ಉತ್ತರ ಇಂಗ್ಲಿಷಿನಲ್ಲಿ ಇರುತ್ತೆ ಎಂದು ಕನ್ನಡ ಪರ ಸಂಘಟನೆಗಳು ಕೂಡ ವಿರೋಧ ವ್ಯಕ್ತ ಪಡಿಸಿದ್ದರು. ಇದೀಗ ಅಪ್ಪು ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ ರಶ್ಮಿಕಾ.Sign in to your account
Username or Email Address


Password

 Remember Me


