ಬೆಂಗಳೂರು: ರಾಜ್ಯದಲ್ಲಿ ಇಂದು ನಿನ್ನೆಗಿಂತಲು ಕಡಿಮೆ ಕೇಸ್ ದಾಖಲಾಗಿದೆ. ಇಂದು ಒಟ್ಟು 106 ಕೇಸ್ ವರದಿಯಾಗಿದ್ದು, ಬೆಂಗಳೂರಿನಲ್ಲಿ 2, ಬಳ್ಳಾರಿ, ಧಾರವಾಡ ಮತ್ತು ವಿಜಯಪುರದಲ್ಲಿ ತಲಾ 1 ಸೇರಿ ಒಟ್ಟು 5 ಮರಣ ಪ್ರಕರಣ ದಾಖಲಾಗಿದೆ.ಬೆಂಗಳೂರು ನಗರದಲ್ಲಿ ಒಟ್ಟು 84 ಪಾಸಿಟಿವ್ ಕೇಸ್ ಮತ್ತು 2 ಮರಣ ಪ್ರಕರಣ ವರದಿಯಾಗಿದೆ. ಒಟ್ಟು 18 ಜಿಲ್ಲೆಗಳಲ್ಲಿ ಶೂನ್ಯ ಪಾಸಿಟಿವ್ ಕೇಸ್ ವರದಿಯಾಗಿದೆ. ರಾಜ್ಯದ ಪಾಸಿಟಿವಿಟಿ ರೇಟ್ 0.29%ಕ್ಕೆ ಮತ್ತು ಮರಣ ಪ್ರಮಾಣ 4.71%ಕ್ಕೆ ಇಳಿಕೆ ಕಂಡಿದೆ. ಇದನ್ನೂ ಓದಿ: Hijab Row: ನಾವು ಯಾವ ದೇಶದಲ್ಲಿ ಇರುತ್ತೇವೆಯೋ ಆ ದೇಶದ ನಿಯಮಗಳನ್ನು ಪಾಲಿಸಬೇಕು: ಅಬ್ದುಲ್ ಖಾದರ್ ನಡುಕಟ್ಟಿನ್ರಾಜ್ಯದ ಉಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,013ಕ್ಕೆ ಇಳಿಕೆ ಕಂಡಿದೆ. ಒಟ್ಟು 154 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,44,432 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,02,344 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 61,244 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 36,326 ಸ್ಯಾಂಪಲ್ (ಆರ್‌ಟಿಪಿಸಿಆರ್ 27,201 + 9,125 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಅಂಡಮಾನ್ – ನಿಕೋಬಾರ್ ದ್ವೀಪಕ್ಕೆ ಅಪ್ಪಳಿಸಲಿದೆ ಚಂಡಮಾರುತ: ಐಎಂಡಿಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 0, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 84, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 2, ಚಿತ್ರದುರ್ಗ 3, ದಕ್ಷಿಣ ಕನ್ನಡ 6, ದಾವಣಗೆರೆ 0, ಧಾರವಾಡ 2, ಗದಗ 0, ಹಾಸನ 0, ಹಾವೇರಿ 0, ಕಲಬುರಗಿ 1, ಕೊಡಗು 0, ಕೋಲಾರ 0, ಕೊಪ್ಪಳ 0, ಮಂಡ್ಯ 0, ಮೈಸೂರು 2, ರಾಯಚೂರು 0, ರಾಮನಗರ 1, ಶಿವಮೊಗ್ಗ 1, ತುಮಕೂರು 1, ಉಡುಪಿ 0, ಉತ್ತರ ಕನ್ನಡ 0, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


