ಹಾವೇರಿ: ಉಕ್ರೇನ್‌ನಲ್ಲಿ ಶೆಲ್ ದಾಳಿಯಿಂದ ಮೃತಪಟ್ಟ ಹಾವೇರಿಯ ಚಳಗೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹವನ್ನು ಕುಟುಂಬಸ್ಥರು ಮೆಡಿಕಲ್ ಕಾಲೇಜಿಗೆ ದಾನ ಮಾಡಲು ನಿರ್ಧರಿಸಿದ್ದಾರೆ.ಈ ಬಗ್ಗೆ ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ ನವೀನ್ ತಂದೆ ಶೇಖರಪ್ಪ ದಾವಣಗೆರೆಯಲ್ಲಿರುವ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ದಾನ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಥಿಯೇಟರ್ ಮೇಲೆ ಬಾಂಬ್ ದಾಳಿ – 130 ಮಂದಿಯ ರಕ್ಷಣೆರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಬರಲಿದೆ. ಸೋಮವಾರ ಮುಂಜಾನೆ 3 ಗಂಟೆಗೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮೃತದೇಹ ಬರಲಿದ್ದು, ಸಂಜೆ ಹೊತ್ತಿಗೆ ಹುಟ್ಟೂರು ತಲುಪುವ ಸಾಧ್ಯತೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಶೆಲ್ ದಾಳಿಗೊಳಗಾದ ಯುವತಿ ನೋಡಲು ಆಸ್ಪತ್ರೆಗೆ ಭೇಟಿಕೊಟ್ಟ ಉಕ್ರೆನ್ ಅಧ್ಯಕ್ಷಭಾರತ ಆಪರೇಷನ್ ಗಂಗಾ ಮಿಷನ್ ಅಡಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಕರೆತಂದು ನಿಟ್ಟುಸಿರು ಬಿಟ್ಟಿದೆ.Sign in to your account
Username or Email Address


Password

 Remember Me


