ಧಾರವಾಡ: ಆ ಗ್ರಾಮದಲ್ಲಿ ಹೋಳಿ ಹಬ್ಬ ಬಂದರೆ ಸಾಕು, ಗ್ರಾಮದ ಜನರೆಲ್ಲಾ ಕೈಯಲ್ಲಿ ಆಯುಧಗಳನ್ನ ಹಿಡಿದುಕೊಂಡು ನಿಲ್ಲುತ್ತಾರೆ. ಏಕೆಂದರೆ ಆ ಗ್ರಾಮದ ಕಾಮಣ್ಣನೇ ಇದಕ್ಕೆ ಕಾರಣ.ಹೌದು, ಜಿಲ್ಲೆಯ ಮುಳಮುತ್ತಲ ಗ್ರಾಮದಲ್ಲಿ ಕಾಮಣ್ಣನ ಹಬ್ಬ ಬಂದರೆ ಸಾಕು, ಇಡೀ ಗ್ರಾಮದ ಜನ ಕೈಯಲ್ಲಿ ಆಯುಧಗಳನ್ನು ಹಿಡಿದು ಕಾಮಣ್ಣನನ್ನು ಕಾವಲು ಕಾಯುತ್ತಾರೆ. ಇದನ್ನೂ ಓದಿ: ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು..!ಏಕೆಂದರೆ ಈ ಕಾಮಣ್ಣನ ಮುಖ ಕಳ್ಳತನ ಮಾಡಲು ಬರುತ್ತಾರೆ ಎಂಬುದಕ್ಕೆ ಇದನ್ನು ಕಾವಲು ಕಾಯುತ್ತಾರೆ. ಇನ್ನು ಇಡೀ ರಾತ್ರಿ ಗ್ರಾಮದ ಜನ ಈ ಕಾಮಣ್ಣನ ದರ್ಶನ ಪಡೆಯುತ್ತಾರೆ. ಅಲ್ಲದೇ ತಮ್ಮ ಇಷ್ಟಾರ್ಥಗಳನ್ನು ಕೂಡ ಈ ಕಾಮಣ್ಣ ಎದುರು ಇಡುತ್ತಾರೆ. ನಾಳೆಯ ದಿನ ಬೆಳಗ್ಗೆ ಕಾಮದಹನ ಮಾಡಿ ನಂತರ ರಂಗ ಪಂಚಮಿ ಆಚರಣೆ ಮಾಡುತ್ತಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧಜಿಲ್ಲೆಯ ಅಣ್ಣಿಗೇರಿಯಿಂದ ಈ ಕಾಮಣ್ಣ ಮುಖವಾಡ ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಹೀಗಾಗಿ ಅಲ್ಲಿಯ ಜನ ಇದನ್ನ ಕದ್ದು ಹೋಗಬಹುದು ಎನ್ನುವ ಕಾರಣಕ್ಕೆ ತಲ್ವಾರ್, ಮಚ್ಚು, ಕೊಡಲಿ ಹಿಡಿದು ಕಾವಲು ಕಾಯುತ್ತಾರೆ.Sign in to your account
Username or Email Address


Password

 Remember Me


