ರಾಯಚೂರು: ಬಿಸಿಲ ನಾಡು ರಾಯಚೂರಿನಲ್ಲಿ ಹೋಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪರಸ್ಪರ ಬಣ್ಣ ಎರಚಿಕೊಂಡು ಜನ ಸಂಭ್ರಮ ಪಡುತ್ತಿದ್ದಾರೆ. ಬಿರುಬೇಸಿಗೆಯಲ್ಲಿ ಹೋಳಿ ಹಬ್ಬ ಜನರಿಗೆ ತಂಪನೆರೆಯುತ್ತಿದೆ. ವಯಸ್ಸಿನ ಭೇದ ಮರೆತು ಹೋಳಿಯಲ್ಲಿ ಜನ ಮಿಂದೇಳುತ್ತಿದ್ದಾರೆ.ಸಂಗೀತ ವಾದ್ಯ, ನೃತ್ಯ ಮಾಡುವ ಮೂಲಕ ಹೋಳಿ ಆಚರಣೆ ಮಾಡಲಾಗುತ್ತಿದೆ. ಕಾಮಣ್ಣನ ದಹನ ಬಳಿಕ ಬೆಳಗ್ಗಿನಿಂದಲೇ ಹೋಳಿ ಆಚರಣೆ ಜೋರಾಗಿದೆ. ಹೋಳಿ ಹಬ್ಬದಲ್ಲಿ ಕಾಮಣ್ಣನ ದಹನ ಹಾಗೂ ಪರಸ್ಪರ ಬಣ್ಣ ಎರಚಾಡುವುದರಿಂದ ಹಾಗೂ ಹಿಜಬ್ ವಿವಾದ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಆಕಸ್ಮಿಕ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ಕಬ್ಬು ಬೆಂಕಿಗಾಹುತಿSign in to your account
Username or Email Address


Password

 Remember Me


