ಕಲಬುರಗಿ: ಮಹಾರಾಷ್ಟ್ರದ ಪುಣೆಯಿಂದ ಎರಡು ದಿನಗಳ ಹಿಂದೆಯಷ್ಟೇ ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಸುಟ್ಟುಹಾಕಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಹೊರವಲಯದ ತಾಜಸುಲ್ತಾನಪುರನಲ್ಲಿ ನಡೆದಿದೆ.ಸುಲ್ತಾನಪುರ ಗ್ರಾಮದ ನಿವಾಸಿ ಮನೋಹರ್ ರುದ್ರಕರ್(35) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮನೋಹರ್ ಪುಣೆಯಲ್ಲಿ ವಾಸವಿದ್ದನು. ಹೋಳಿ ಹಬ್ಬದ ಪ್ರಯುಕ್ತ ಎರಡು ದಿನಗಳ ಹಿಂದಷ್ಟೇ ಗ್ರಾಮಕ್ಕೆ ಆಗಮಿಸಿದ್ದನು. ಇದನ್ನೂ ಓದಿ: 13 ವರ್ಷದ ಬಾಲಕ ಟ್ರಕ್ ಓಡಿಸುತ್ತಾ ವ್ಯಾನ್‍ಗೆ ಡಿಕ್ಕಿ – 9 ಮಂದಿ ಬಲಿ, ಹೊತ್ತಿ ಉರಿದ ವಾಹನನಿನ್ನೆ(ಸೋಮವಾರ) ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಹೋರಹೋಗಿದ್ದ ಮನೋಹರ್‌ನನ್ನು ಹಂತಕರು ಕೊಲೆಗೈದು ಗ್ರಾಮದಿಂದ ಕೊಂಚ ದೂರದಲ್ಲಿ ದೇಹ ಸುಟ್ಟುಹಾಕಿದ್ದಾರೆ. ದೇಹ ಅರ್ಧಂಬರ್ದ ಸುಟ್ಟು ಕರಕಲಾಗಿದೆ. ಕೊಲೆಗೆ ಕಾರಣ ಏನು? ಹಂತಕರು ಯಾರು? ಅನ್ನೋದು ತಿಳಿದುಬಂದಿಲ್ಲ.ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಹಂತಕರ ಬಂಧನಕ್ಕೆ ಜಾಲ ಬೀಸಿದ್ದಾರೆ. ಹಂತಕರ ಬಂಧನ ನಂತರವಷ್ಟೆ ಕೊಲೆಗೆ ಕಾರಣ ಏನು ಎಂಬುದು ತಿಳಿದುಬರಬೇಕಿದೆ. ಈ ಭೀಕರ ಹತ್ಯೆಯಿಂದ ಗ್ರಾಮದಲ್ಲಿ ಆತಂಕದ ಛಾಯೆ ಆವರಿಸಿದೆ. ಇದನ್ನೂ ಓದಿ: ಅಪ್ಪ ಬೇಡ ಎಂದರೆ ಆಸ್ತಿ ಹಕ್ಕು ಇಲ್ಲ: ಸುಪ್ರೀಂಕೋರ್ಟ್ Sign in to your account
Username or Email Address


Password

 Remember Me


