ಮಂಗಳೂರು: ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ತನ್ನ ಕ್ಷೇತ್ರದ ಕಾರ್ಯಕರ್ತರಿಗಾಗಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಉಚಿತವಾಗಿ ಅವಕಾಶ ಕಲ್ಪಿಸಿದ್ದರು. ಈ ವೇಳೆ ಅವರೇ ಸಿನಿಮಾ ನೋಡಿ ಭಾವುಕರಾಗಿ ಹೊರಬಂದಿದ್ದಾರೆ.ಮಂಗಳೂರಿನ ಭಾರತಗ ಸಿನಿಮಾ ಮಲ್ಟಿಫ್ಲೆಕ್ಸ್‍ನಲ್ಲಿ ಭರತ್ ಶೆಟ್ಟಿ ಅವರೇ ವೈಯಕ್ತಿಕವಾಗಿ ಎಲ್ಲರ ಟಿಕೆಟ್‍ಗಳನ್ನು ಖರೀದಿಸಿ ವೀಕ್ಷಣೆಗೆ ಪೆÇ್ರೀತ್ಸಾಹಿಸಿದರು. ಮೂರು ಗಂಟೆಗಳ ಕಾಲ ಸಿನಿಮಾವನ್ನ ಕಾರ್ಯಕರ್ತರೊಂದಿಗೆ ಅವರೂ ವೀಕ್ಷಿಸಿ ಹೊರಬಂದ ಭರತ್ ಶೆಟ್ಟಿ ಭಾವುಕರಾಗಿದ್ದರು.  ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್ಈ ಹಿಂದೆ ನಿಜವಾಗಿ ನಡೆದ ಅತ್ಯಾಚಾರ, ನರಮೇಧ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಿನಿಮಾ ನೋಡಿದ ಮೇಲೆ ಕಣ್ಣಾರೆ ಕಂಡ ರೀತಿ ಇದೆ. ಈ ದೃಶ್ಯಗಳನ್ನು ನೋಡಿ ಮನಸ್ಸು ಭಾರವಾಗಿ ವಿಚಲಿತಗೊಂಡಿದೆ. ಮಾತಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.ಈ ಹಿಂದೆ ಸರ್ಕಾರ ಪೊಲೀಸ್ ಕಾನೂನು ಇದ್ದರೂ ಏನು ಮಾಡಲು ಸಾಧ್ಯವಾಗದೆ ಇಂತಹ ನರಮೇಧವನ್ನು ಮೌನವಾಗಿ ಸಹಿಸಿಕೊಂಡು ಇದ್ದದ್ದಾದರೂ ಯಾಕೆ ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿದೆ. ಇಂತಹ ಘಟನೆ ಮುಂದೆ ಮರುಕಳಿಸಬಾರದು ಎಂದರು.ವಿದೇಶಿ ಶಕ್ತಿಗಳ ಉಗ್ರಗಾಮಿಗಳ ಕೈವಾಡ ಹಾಗೂ ಜನಾಂಗೀಯತೆಯನ್ನು ಬೆಳೆಯಲು ಬಿಡದೆ ದೇಶವನ್ನು ಸದೃಢವಾಗಿ ಬೆಳೆಸುವ ಹಾಗೂ ಕಾಶ್ಮೀರಿ ಪಂಡಿತರಿಗೆ ಅವರ ನ್ಯಾಯಯುತ ಹಕ್ಕನ್ನು ಒದಗಿಸಿಕೊಡುವ ಕೆಲಸವಾಗಬೇಕಾಗಿದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನದ ರಜೆ: ಅಸ್ಸಾಂ ಸಿಎಂಪ್ರಸಿದ್ಧ ಭಾಗವತ್ ಪಟ್ಲ, ಸತೀಶ್ ಶೆಟ್ಟಿ ಅವರು ಮಾಧ್ಯಮದೊಂದಿಗೆ ಮಾತನಾಡಿದ್ದು, ಒಮ್ಮೆಯಾದರೂ ಜನರು ಈ ಸಿನಿಮಾವನ್ನು ನೋಡಲೇ ಬೇಕಿದೆ. ಮನಸ್ಸು ಪರಿವರ್ತನೆಯಾಗುವ ಚಲನಚಿತ್ರವಿದು ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿ ಇಂತಹ ದುರ್ಘಟನೆ ನಡೆದಿದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ನೋವನ್ನು ತೋಡಿಕೊಂಡರು.Sign in to your account
Username or Email Address


Password

 Remember Me


