ಬೆಂಗಳೂರು: ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಎಫ್‍ಐಆರ್ ದಾಖಲು ಮಾಡಿರುವ ಪ್ರಕರಣದಲ್ಲಿ ನಿಯಮಾವಳಿ ಪಾಲನೆಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಎಲ್ಲವನ್ನೂ ಪರಿಶೀಲಿಸಿ ಸಭಾಪತಿಗಳ ಘನತೆ ಎತ್ತಿಹಿಡಿಯುವ ರೀತಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.ವಿಧಾನ ಪರಿಷತ್ ಕಲಾಪದಲ್ಲಿ ಜೆಡಿಎಸ್ ಸದಸ್ಯ ಬೋಜೇಗೌಡ ವಿಷಯ ಪ್ರಸ್ತಾಪ ಮಾಡಿದರು. ದೂರು ಬಂದಿರುವುದು ಸಭಾಪತಿಗಳ ವಿರುದ್ಧ. ಪೂರ್ವಾನುಮತಿ ಪಡೆಯದೇ ಎಫ್‍ಐಆರ್ ದಾಖಲು ಮಾಡಿದ್ದು ಸರಿಯಲ್ಲ. ಸಭಾಪತಿ ಅವರಿಗೇ ಈ ರೀತಿ ಆಗಿರುವುದು ಸರಿಯಲ್ಲ. ಕೂಡಲೇ ತನಿಖಾಧಿಕಾರಿ ವಿರುದ್ಧ ಕ್ರಮ ಆಗಲೇಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್ವಿಪಕ್ಷ ನಾಯಕ ಹರಿಪ್ರಸಾದ್ ಈ ವೇಳೆ ಮಾತನಾಡಿ, ಈ ಪ್ರಕರಣದಲ್ಲಿ ದಲಿತ ಎಸ್‍ಐನ ಅಮಾನತುಗೊಳಿಸಿ, ಬಲಿಪಶು ಮಾಡಲಾಗಿದೆ. ಯಾರೋ ಒಬ್ಬ ಹರಕೆಯ ಕುರಿ ಸಿಕ್ಕ ಎಂದು ಮಾಡುವುದು ಸರಿಯಲ್ಲ. ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಎಫ್‍ಐಆರ್ ದಾಖಲಾದರೆ ಎಷ್ಟು ಸಮಯದಲ್ಲಿ ಎಸ್‍ಪಿ ಕಚೇರಿಗೆ ಮಾಹಿತಿ ಹೋಗಲಿದೆ. ಯಾಕೆ ಎಸ್‍ಪಿ ತನಿಖೆಗೆ ಆದೇಶಿಸಲಿಲ್ಲ. ಗೃಹ ಸಚಿವರ ಗಮನಕ್ಕಾದರೂ ತರಬಹುದಿತ್ತು. ಆದರೆ ಅವರು ಆ ಕೆಲಸವನ್ನೂ ಮಾಡಿಲ್ಲ. ಎಸ್‍ಪಿ ಜವಾಬ್ದಾರಿ ಕೂಡ ಇದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ ಅವರು, ಸಭಾಪತಿ ಸ್ಥಾನ ಬಹಳ ಮುಖ್ಯ. ರಾಜ್ಯಪಾಲರ ನಂತರದ ಸ್ಥಾನ ಅದು. ಸಾಂವಿಧಾನಿಕ ಹುದ್ದೆಗಳ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ನಿಯಮ ಪಾಲಿಸಬೇಕು. ಅದಕ್ಕಾಗಿಯೇ ಪೆÇ್ರೀಟೋಕಾಲ್ ಇದೆ ಎಂದು ವಿವರಿಸಿದರು. ಇದನ್ನೂ ಓದಿ: ಹ್ಯಾಪಿ ಬರ್ತ್ ಡೇ ಅಪ್ಪು : ದಕ್ಷಿಣದ ಸಿನಿತಾರೆಯರ ಭಾವುಕ ಸಂದೇಶ ಈ ಕೇಸ್‍ನಲ್ಲಿ ಪ್ರೊಸೀಜರ್ ಫಾಲೋ ಆಗಿಲ್ಲ. ಹಾಗಾಗಿ ಎಫ್‍ಐಆರ್ ದಾಖಲಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಐಒ, ಡಿವೈಎಸ್‍ಪಿ ಇರುತ್ತಾರೆ ಹಾಗಾಗಿ ಎಲ್ಲ ಪರಿಶೀಲಿಸಲಾಗುತ್ತಿದೆ. ಸಭಾಪತಿ ಹುದ್ದೆ ಘನತೆ ಎತ್ತಿಹಿಡಿದು ಮತ್ತೆ ಇಂತಹ ಘಟನೆ ಮರುಕಳಿಸದಂತೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.Sign in to your account
Username or Email Address


Password

 Remember Me


