ಬೆಂಗಳೂರು: ಜೇಮ್ಸ್ ಚಿತ್ರದ ತೆರಿಗೆ ವಿನಾಯಿತಿ ನೀಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.ವಿಧಾನಸೌಧದಲ್ಲಿ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಮನದಾಳದ ಶುಭಾಶಯ ಹೇಳುತ್ತೇನೆ. ಅವರು ಇಂದು ಇಲ್ಲ. ವ್ಯಕ್ತಿ ಮೃತಪಟ್ಟ ಬಳಿಕ ನೆನಪು ಮಾಡಿಕೊಳ್ಳಲ್ಲ. ಆದರೆ ಪುನೀತ್ ಮೃತರಾದ ಬಳಿಕವೂ ಅವರ ಹುಟ್ಟುಹಬ್ಬದ ಆಚರಣೆ ಮಾಡಲಾಗುತ್ತಿದೆ. ಇದರಲ್ಲೇ ಅವರ ಅಭಿಮಾನ ಎಷ್ಟು ಅಂತ ತಿಳಿಯುತ್ತದೆ. ಅವರಿಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಹೇಳಿದ್ದಾರೆ. ಕುಟುಂಬದ ಜೊತೆ ಮಾತನಾಡಿ ತೀರ್ಮಾನ ಮಾಡೋದಾಗಿ ಸಿಎಂ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಹಾಗೂ ಜೇಮ್ಸ್ ನಡುವೆ ಹೋಲಿಕೆ ಮಾಡಿ ತಂದು ಹಾಕ್ಬೇಡಿ: ಸಿ.ಟಿ.ರವಿನಾನು ಕಾವೇರಿ ಥಿಯೇಟರ್ ಮೂಲಕ ಬಂದೆ. ಅಲ್ಲಿನ ಸಂಭ್ರಮಾಚರಣೆ ನೋಡಿಕೊಂಡು ಬಂದಿದ್ದೇನೆ. ರಾತ್ರಿ ಹನ್ನೆರಡು ಗಂಟೆಯಲ್ಲೂ ಹುಟ್ಟುಹಬ್ಬದ ಸಂಭ್ರಮ ನೋಡಿದೆ. ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬುರ್ಕಾ ಮಾನಸಿಕ ಗುಲಾಮಗಿರಿ ಸಂಕೇತ ಅಂತ ಅಂಬೇಡ್ಕರ್ ಹೇಳಿದ್ದಾರೆ: ಸಿ.ಟಿ.ರವಿSign in to your account
Username or Email Address


Password

 Remember Me


