ಬೆಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ಅಭಿನಯದ ಕೊನೆ ಚಿತ್ರ ಜೇಮ್ಸ್ ರಾಜ್ಯದ 400 ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. ರಾಜ್ಯದಾದ್ಯಂತ ಅಪ್ಪು ಅಭಿಮಾನಿಗಳು ಥಿಯೇಟರಿಗೆ ಆಗಮಿಸಿ ಹಬ್ಬ ಮಾಡುತ್ತಿದ್ದಾರೆ.ಅಪ್ಪು ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಅಪ್ಪು ಅಗಲಿದ ನೋವಿದ್ದರೂ, ಅವರ ಕೊನೆ ಸಿನಿಮಾ ಜೇಮ್ಸ್‍ನ್ನು ನೋಡುವ ಮೂಲಕ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಚಿತ್ರ ತೆರೆಕಂಡಿದೆ. ಥಿಯೇಟರ್ ಗಳ ಮುಂದೆ ಪುನೀತ್ ರಾಜ್‍ಕುಮಾರ್ ಅವರ ಬೃಹತ್ ಕಟೌಟ್‍ಗಳನ್ನು ಹಾಕಿ ಜೇಮ್ಸ್ ಜಾತ್ರೆಯನ್ನು ಆಚರಣೆ ಮಾಡುತ್ತಿದ್ದಾರೆ.ಥಿಯೇಟರ್ ಮುಂಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಥಿಯೇಟರ್ ಸಿಬ್ಬಂದಿ, ಅಭಿಮಾನಿಗಳು ಥಿಯೇಟರ್‌ಗೆ ಬಾಳೆ ಕಂದು, ಮಾವಿನ ಸೊಪ್ಪು, ಹೂವಿನ ಹಾರವನ್ನು ಕಟ್ಟಿ ಅಲಂಕರಿಸಿದ್ದಾರೆ. ಅಪ್ಪು ಅಭಿಮಾನಿಗಳು ಅಪ್ಪು ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಇದನ್ನೂ ಓದಿ:  ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹಾಕಿ ಅಪ್ಪುಗೆ ಜೈಕಾರ ಕೂಗುತ್ತಿದ್ದಾರೆ. ಸ್ಕ್ರೀನ್ ಮುಂದೆ ಅಪ್ಪು ಭಾವಚಿತ್ರ ಇರುವ ಧ್ವಜ ಹಿಡಿದು ಸಂಭ್ರಮಾಚರಣೆ ಮಾಡಿದ್ದಾರೆ. ಸ್ಕ್ರೀನ್ ಮೇಲೆ ಅಪ್ಪು ಕಾಣಿಸುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಸ್ಕ್ರೀನ್ ಮುಂದೆ ಅಭಿಮಾನಿಗಳು ಹುಚ್ಚೇದ್ದು ಕುಣಿತ್ತಿದ್ದಾರೆ. ಬೆಂಗಳೂರಿನಲ್ಲೂ ಜೇಮ್ಸ್ ಸುನಾಮಿ ಜೋರಾಗೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಜೇಮ್ಸ್ ಚಿತ್ರದ 1003 ಟಿಕೆಟ್ ಖರೀದಿ ಮಾಡಿದ ಅಪ್ಪು ಅಭಿಮಾನಿSign in to your account
Username or Email Address


Password

 Remember Me


