ಬೆಂಗಳೂರು: ಇಂದು ಪವರ್ ಸ್ಟಾರ್, ಎಲ್ಲರ ಮೆಚ್ಚಿನ ಅಪ್ಪು. ನಗುವಿನ ಶ್ರೀಮಂತ ಡಾ. ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ. ಇದೇ ಮೊದಲ ಬಾರಿಗೆ ಪುನೀತ್ ಇಲ್ಲದೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಇಂದೇ ಪುನೀತ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ತೆರೆಗಪ್ಪಳಿಸಿದೆ.ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮ ರಾಜ್ಯದಲ್ಲಿ ಮನೆ ಮಾಡಿದೆ. ಪುನೀತ್ ಇಲ್ಲದೇ ಆಗ್ತಿರೋ ಮೊದಲ ಹುಟ್ಟು ಹಬ್ಬ ಅನ್ನೋ ಬೇಸರ ಕೂಡ ಅಭಿಮಾನಿಗಳಲ್ಲಿದೆ. ಇದನ್ನೂ ಓದಿ: ಜೇಮ್ಸ್ ಚಿತ್ರದ 1003 ಟಿಕೆಟ್ ಖರೀದಿ ಮಾಡಿದ ಅಪ್ಪು ಅಭಿಮಾನಿಅಭಿಮಾನಿ ದೇವರುಗಳ ಜೈಕಾರ ಮುಗಿಲು ಮುಟ್ಟಿದ್ದು, ಸಂಭ್ರಮ ಮನೆ ಮಾಡಿದೆ. ಕುಟುಂಬಸ್ಥರು ಅಪ್ಪು ಸಮಾಧಿ ಬಳಿ ಕೇಕ್ ಕತ್ತರಿಸಿದ್ದಾರೆ. `ಆಕಾಶ’ ನೋಡಿ ಅಪ್ಪುಗೆ ರಾಘಣ್ಣ ವಿಶ್ ಮಾಡಿದ್ದಾರೆ. ಅಲ್ಲದೆ ಇವತ್ತು ನಿಮ್ಮಲ್ಲಿ ಕೋಟ್ಯಂತರ ಅಪ್ಪು ಕಾಣ್ತಿದ್ದಾನೆ. ಅಪ್ಪು ಆಸೆಯಂತೆ ಬರ್ತ್ ಡೇ ದಿನವೇ ಚಿತ್ರ ರಿಲೀಸ್ ಆಗುತ್ತಿದೆ ಎಂದು ಕಂಠೀರವ ಸ್ಟುಡಿಯೋ ಬಳಿ ಹೇಳಿದರು. ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನನಿನ್ನೆ ರಾತ್ರಿ ಪುನೀತ್ ಸಮಾಧಿ ಸ್ಥಳಕ್ಕೆ ಆಗಿಮಿಸಿದ್ದ ಪುನೀತ್ ರಾಜ್‍ಕುಮಾರ್ ಕುಟುಂಬದವರು ಪುನೀತ್ ಸಮಾಧಿಯ ದರ್ಶನ ಪಡೆದು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಅಪ್ಪುಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. ವಿನಯ್ ರಾಜ್ ಕುಮಾರ್ ಪುನೀತ್ ಸಮಾಧಿಗೆ ಪೂಜೆ ಮಾಡಿ ಅಪ್ಪು ಚಿಕ್ಕಪ್ಪನ ಹುಟ್ಟುಹಬ್ಬವನ್ನು ಅವರು ಇಲ್ಲದೇ ಇದ್ದರೂ ನಮ್ಮ ನಡುವೆ ಪರಮಾತ್ಮನಂತೆ ಇದ್ದಾರೆ ಅನ್ನೋ ಭಾವನೆಯಿಂದ ಸಮಾಧಿಗೆ ನಮಸ್ಕರಿಸಿ ಆರ್ಶೀವಾದ ಪಡೆದ್ರು. ಇದನ್ನೂ ಓದಿ: ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?ಇತ್ತ ಇಂದು ಅಭಿಮಾನಿಗಳಿಗೆ ಅಪ್ಪು ಸಮಾಧಿ ನೋಡಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಮುಂಜಾನೆಯಿಂದ ಕಾದು ನಿಂತಿದ್ದ ಅಭಿಮಾನಿಗಳನ್ನು ಸಮಾಧಿ ನೋಡಲು ಬಿಟ್ಟಿದ್ದಾರೆ.Sign in to your account
Username or Email Address


Password

 Remember Me


