ಬೆಂಗಳೂರು: ಟಿವಿಯಲ್ಲಿ ಬಂದಾಗ ಜೇಮ್ಸ್ ಚಿತ್ರ ನೋಡ್ತೀನಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ಎಲ್ಲಾರು ಜೇಮ್ಸ್ ಚಿತ್ರ ನೋಡಿ. ನಾನು ಸಾಮಾನ್ಯವಾಗಿ ಚಲಚಿತ್ರ ನೋಡಲು ಥಿಯೇಟರ್ ಗೆ ಹೋಗಲ್ಲ. ಯಾರಾದರೂ ಒತ್ತಾಯ ಮಾಡಿ ಕರೆದಾಗ ಹೋಗಿದ್ದೇನೆ. ಸ್ವಲ್ಪ ನೋಡಿ ಎದ್ದು ಬಂದಿದ್ದು ಇದೆ. ಜೇಮ್ಸ್ ಚಿತ್ರ ನೋಡ್ತೀನಿ ಟಿವಿಯಲ್ಲಿ ಬಂದಾಗ ಎಂದರು. ಇದನ್ನೂ ಓದಿ: ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂಜೇಮ್ಸ್ ಸಿನಿಮಾಗೆ ಟ್ಯಾಕ್ಸ್ ವಿನಾಯಿತಿ ಕೊಡಬೇಕು ಎಂದು ಒತ್ತಾಯಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಬೊಮ್ಮಾಯಿಗೆ ಅವರ ಮೇಲೆ ಪ್ರೀತಿ ಇದೆ. ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು. ಇದರ ಬಗ್ಗೆ ಒತ್ತಾಯ ಮಾಡಿದ್ದೇನೆ. ಪುನೀತ್ ಜನಪ್ರಿಯ ನಾಯಕ. ರಾಜ್ ಕುಮಾರ್ ಇದ್ದಾಗ ನನ್ನನ್ನು ನಮ್ಮ ಕಾಡಿನವರು ಅಂತ ಹೇಳುತ್ತಿದ್ರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.Sign in to your account
Username or Email Address


Password

 Remember Me


