ಕಲಬುರಗಿ: ಡಾ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನೆನೆದು ಸಿನಿರಂಗದವರು ಮಾತ್ರವಲ್ಲ ಅವರ ಸಮಾಜಮುಖಿ ಕೆಲಸಗಳನ್ನು ನೆನೆದು ರಾಜಕೀಯ ಮುಖಂಡರು ಅವರನ್ನು ಗುಣಗಾನ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು ಅಪ್ಪು ನೆನೆದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಮಾಜಿ ಸಚಿವರು, ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸಹ ಅಪ್ಪು ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ನೆನೆದು ಭಾವುಕ ಪೋಸ್ಟ್ ಮಾಡಿದ್ದಾರೆ.ಖರ್ಗೆ ಅವರು ಟ್ವಿಟ್ಟರ್‌ನಲ್ಲಿ, ಕಾಂಗ್ರೆಸ್ ಯೂಥ್ ಐಕಾನ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿರುವುದು ನಿಜಕ್ಕೂ ನಂಬಲಾರದ ಸತ್ಯ. ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು, ಅವರ ಯೋಚನೆಗಳು, ಯೋಜನೆಗಳು ಎಂದೆಂದಿಗೂ ನಮ್ಮೊಂದಿಗಿರುತ್ತದೆ ಎಂದು ಕರುನಾಡ ಕುವರನ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್ಸಾವಿರಾರು ಮಕ್ಕಳಿಗೆ ವಿದ್ಯೆ ನೀಡಿ, ಅನೇಕರಿಗೆ ತೆರೆಮರೆಯಲ್ಲಿ ನಿಂತು ಬದುಕು ಕಟ್ಟಿ ಕೊಟ್ಟ ರಾಜಕುಮಾರ, ಎಂದೆಂದಿಗೂ ಮರೆಯಲಾಗದ ಮಾಣಿಕ್ಯ ಡಾ.ಪುನೀತ್ ರಾಜ್‍ಕುಮಾರ್ ಅವರ ಜಯಂತಿಯಂದು ಅವರನ್ನ ಹೃದಯ ಪೂರ್ವಕವಾಗಿ ಸ್ಮರಿಸುತ್ತೇನೆ ಎಂದು ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


