ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೊನೆಯ ಸಿನಿಮಾ ‘ಜೇಮ್ಸ್’ ವಿಶ್ವದಾದ್ಯಂತ ತೆರೆಗೆ ಬರುತ್ತಿದ್ದು, ಈ ವೇಳೆ ಅಪ್ಪು ಅಭಿಮಾನಿಯೊಬ್ಬರು ಮೊದಲ ಶೋನ 1003 ಟಿಕೆಟ್‍ಗಳನ್ನು ಅಭಿಮಾನಿಗಳಿಗಾಗಿ ಖರೀದಿಸಿದ್ದಾರೆ. ನೆಲಮಂಗಲದ ನಿವಾಸಿ ಅಪ್ಪು ಅಪ್ಪಟ ಅಭಿಮಾನಿ ಗೋವಿಂದರಾಜ್ 1003 ಟಿಕೆಟ್ ಖರೀದಿ ಮಾಡಿ, ಅಪ್ಪು ಮೇಲಿರುವ ಅಭಿಮಾನ ಮೆರೆದಿದ್ದಾರೆ.ಅಲ್ಲದೆ ಜೇಮ್ಸ್ ಚಿತ್ರದ ಟಿಕೆಟ್ ಅನ್ನು ವಿಭಿನ್ನವಾಗಿ ಮುದ್ರಿಸಿದ್ದು ಡಾ. ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜಕುಮಾರ್ ಹಾಗೂ ಅಭಿಮಾನಿ ಗೋವಿಂದ ರಾಜ್ ಇರುವ ಟಿಕೆಟ್ ಅನ್ನು ತಯಾರು ಮಾಡಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನಬೆಂಗಳೂರು ಹೊರವಲಯದ ನೆಲಮಂಗಲದಲ್ಲಿರುವ ರೂಪ ಚಿತ್ರಮಂದಿರದಲ್ಲಿ ನಾಳೆ ಬೆಳಗ್ಗೆ 7 ಗಂಟೆಗೆ ಮೊದಲ ಶೋ ಆರಂಭವಾಗಲಿದ್ದು, ತಳಿರು ತೋರಣಗಳಿಂದ ಅಲಂಕರಿಸಿ ಎಲ್ಲಾ ತಯಾರಿಯನ್ನು ಅಭಿಮಾನಿಗಳು ಮಾಡಿದ್ದಾರೆ.ಕೇವಲ ನೆಲಮಂಗಲದಲ್ಲಿ ಮಾತ್ರವಲ್ಲ, ರಾಜ್ಯದ ಬಹುತೇಕ ಕಡೆ ಅಭಿಮಾನಿಗಳು ಇದೇ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಜತೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ನಟಿಸಿದ್ದು, ಮೂವರು ಸಹೋದರರು ನಟಿಸಿದ ಮೊದಲ ಮತ್ತು ಕೊನೆ ಸಿನಿಮಾ ಇದಾಗಿದೆ. ಹಾಗಾಗಿ ಮೂವರು ಕಲಾವಿದರ ಅಭಿಮಾನಿಗಳು ಈ ಸಿನಿಮಾವನ್ನು ನೋಡಲು ಕಾತರರಾಗಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್ Sign in to your account
Username or Email Address


Password

 Remember Me


