ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ಮತ್ತು ಪುನೀತ್ ಸಹೋದರಿ ಪೂರ್ಣಿಮಾ ರಾಜ್ ಕುಮಾರ್ ಜಂಟಿಯಾಗಿ ಇಂದು ಬೆಂಗಳೂರಿನ ಕಾಕ್ಸ್ ಟೌನ್ ನ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದ ಐದು ಜನ ಗಂಡು ಮಕ್ಕಳಿಗೆ ‘ಪುನೀತ್ ರಾಜ್ ಕುಮಾರ್” ಎಂದು ನಾಮಕರಣ ಮಾಡಿದ್ದಾರೆ. ಆಯಾ ಮಕ್ಕಳ ತಾಯಿಯಂದಿರು ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಪುನೀತ್ ಜನಿಸಿದ ಒಂದು ದಿನ ಮುಂಚೆಯೇ ತಮ್ಮ ಮಕ್ಕಳಿಗೆ ನೆಚ್ಚಿನ ನಟನ ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನಐದೂ ಮಕ್ಕಳಿಗೆ ಪುನೀತ್ ಹೆಸರಿಟ್ಟು ಹಾರೈಸಿದ ತಾರಾ ಮಾತನಾಡಿ, ‘ತಮ್ಮ ಮಕ್ಕಳಿಗೆ ಪುನೀತ್ ಅಂತ ಹೆಸರಿಡಬೇಕು ಎನ್ನುವುದು ಆ ಅಮ್ಮಂದಿರ ಆಸೆ ಆಗಿತ್ತು. ಹೀಗಾಗಿ ಪುನೀತ್ ಅವರ ಕುಟುಂಬವನ್ನು ಸಂಪರ್ಕಿಸಿ, ಅವರ ಉಪಸ್ಥಿತಿಯಲ್ಲೇ ಈ ಮಕ್ಕಳ ನಾಮಕರಣ ಮಾಡಿದ್ದೇವೆ. ಮಕ್ಕಳು ಪುನೀತ್ ರೀತಿಯಲ್ಲೇ ಜಗತ್ತಿಗೆ ಮಾದರಿ ಆಗಲಿ ಎಂದು ಹಾರೈಸಿದ್ದೇನೆ’ ಎಂದರು. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್ನಾಳೆ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬ. ಇದೇ ವೇಳೆಯೇ ಅವರ  ನಟನೆಯ ಕೊನೆಯ ಸಿನಿಮಾ ರಿಲೀಸ್ ಆಗುತ್ತಿದೆ. ವಾರದಿಂದ ಈ ಬಾರಿಯ ಹುಟ್ಟುಹಬ್ಬವನ್ನು ಪುನೀತ್ ಅವರ ಅನುಪಸ್ಥಿತಿಯಲ್ಲಿ ಹಾಜರಿಸಲು ನಾನಾ ರೀತಿಯಲ್ಲಿ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದಾರೆ.Sign in to your account
Username or Email Address


Password

 Remember Me


