ಮೊನ್ನೆಯಷ್ಟೇ ದುನಿಯಾ ವಿಜಯ್ ತೆಲುಗಿನ ತಮ್ಮ ಚೊಚ್ಚಲು ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಒಂದು ವಾರ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಇನ್ನೂ ಹೆಸರಿಡದ ಆ ಸಿನಿಮಾದಲ್ಲಿನ ವಿಜಯ್ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ಈ ಸಿನಿಮಾದಲ್ಲಿ ವಿಜಯ್ ಅವರ ಪಾತ್ರದ ಹೆಸರನ್ನೂ ರಿವಿಲ್ ಮಾಡಲಾಗಿದೆ. ಮುಸಳಿ ಮಡಗು ಪ್ರತಾಪ್ ರೆಡ್ಡಿ ಹೆಸರಿನ ಪಾತ್ರವನ್ನು ವಿಜಯ್ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ಐದು ಮಕ್ಕಳಿಗೆ ‘ಪುನೀತ್ ರಾಜಕುಮಾರ್’ ಅಂತ ನಾಮಕರಣ ಮಾಡಿದ ನಟಿ ತಾರಾತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ಈ ಹೊಸ ಸಿನಿಮಾದಲ್ಲಿ ವಿಜಯ್ ನೆಗೆಟಿವ್ ಶೇಡ್ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಗಾಗಿ ವಿಜಯ್, ಪತ್ನಿಯೊಂದಿಗೆ ಈಗಾಗಲೇ ತೆರಳಿದ್ದಾರೆ. ಇದನ್ನೂ ಓದಿ : ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನವಿಲನ್ ಆಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ದುನಿಯಾ ವಿಜಯ್, ಆನಂತರ ದುನಿಯಾ ಚಿತ್ರ ಅವರನ್ನು ಹೀರೋ ಆಗಿ ಮಾಡಿತು. ಅಲ್ಲಿಂದ ಅವರು ನಾಯಕರಾಗಿಯೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು. ಈಗ ಮತ್ತೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದು ತೆಲುಗು ಸಿನಿಮಾದಲ್ಲಿ ಎನ್ನುವುದು ವಿಶೇಷ. ಗೋಪಿಚಂದ್ ಮಲಿನೇನೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಾಲಯ್ಯನ 107ನೇ ಸಿನಿಮಾ ಇದಾಗಿದೆ.Sign in to your account
Username or Email Address


Password

 Remember Me


