ಹುಬ್ಬಳ್ಳಿ: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಚುಡಾಯಿಸಿದ ಕಾಮುಕನಿಗೆ ಸಹೋದ್ಯೋಗಿಗಳು ಮತ್ತು ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.ಹುಬ್ಬಳ್ಳಿಯ ಗೋಕುಲ ರಸ್ತೆಯ ಐಸಿಸಿ ಬ್ಯಾಂಕ್ ಮುಂದುಗಡೆ ಈ ಘಟನೆ ನಡೆದಿದೆ. ಕಳೆದ ಒಂದು ವಾರದಿಂದ ಯುವತಿಯನ್ನು ಕಿರಾತಕ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಇಂದು ಸಹ ಯುವತಿಯ ಕಚೇರಿ ಬಳಿ ಬಂದ ಕಾಮುಕ, ಯುವತಿ ಮತ್ತು ಆಕೆಯ ಸ್ನೇಹಿತೆಗೆ ಚುಡಾಯಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನೂ ಓದಿ: ಇಮ್ರಾನ್‌ ಖಾನ್‌ ನೂರಕ್ಕೆ ನೂರರಷ್ಟು ತೊಂದರೆಯಲ್ಲಿದ್ದಾರೆ: ಮಿತ್ರ ಪಕ್ಷ ಹೇಳಿಕೆಇದನ್ನು ಕಂಡ ಯುವತಿಯ ಸಹೋದ್ಯೋಗಿಗಳು ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಸಹ ಆಗಮಿಸಿದ್ದಾರೆ. ಬಳಿಕ ಕಾಮುಕ ಯುವತಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದು, ಸದ್ಯ ಪೊಲೀಸ್ ಠಾಣೆಗೆ ಕಾಮುಕ ಯುವಕನನ್ನು ಕರೆದುಕೊಂಡ ಹೋಗಲಾಗಿದೆ. ಇದನ್ನೂ ಓದಿ: ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ನ್ಯಾಯ ಸಿಗದಿದ್ರೆ ಪಾಕಿಸ್ತಾನ, ಆಫ್ಘನ್‌ಗೆ ಹೋಗಲಿ: ಸುವರ್ಣSign in to your account
Username or Email Address


Password

 Remember Me


