ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 129 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ 101 ಪ್ರಕರಣ ವರದಿಯಾದರೆ, ಉಳಿದ ಜಿಲ್ಲೆಗಳಲ್ಲಿ ಒಟ್ಟು ಸೇರಿ 28 ಪ್ರಕರಣ ದಾಖಲಾಗಿದೆ. 2 ಮರಣ ಪ್ರಕರಣ ವರದಿಯಾಗಿದೆ.ಈ ಮೂಲಕ ರಾಜ್ಯದ ಪಾಸಿಟಿವಿಟಿ ರೇಟ್ 0.49%ಕ್ಕೆ ಮತ್ತು ಮರಣ ಪ್ರಮಾಣ 1.55%ಕ್ಕೆ ಇಳಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಒಟ್ಟು 101 ಪಾಸಿಟಿವ್ ಕೇಸ್ ಮತ್ತು 1 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾಳೆಯಿಂದ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್ರಾಜ್ಯದ ಉಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,314ಕ್ಕೆ ಇಳಿಕೆ ಕಂಡಿದೆ. ಒಟ್ಟು 206 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,44,041 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,01,636 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 55,815 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 26,055 ಸ್ಯಾಂಪಲ್ (ಆರ್‌ಟಿಪಿಸಿಆರ್ 16,017 + 10,038 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಹಿಜಬ್‌- ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 0, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 101, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 5, ಚಿತ್ರದುರ್ಗ 6, ದಕ್ಷಿಣ ಕನ್ನಡ 3, ದಾವಣಗೆರೆ 0, ಧಾರವಾಡ 2, ಗದಗ 0, ಹಾಸನ 0, ಹಾವೇರಿ 0, ಕಲಬುರಗಿ 0, ಕೊಡಗು 1, ಕೋಲಾರ 1, ಕೊಪ್ಪಳ 0, ಮಂಡ್ಯ 1, ಮೈಸೂರು 0, ರಾಯಚೂರು 0, ರಾಮನಗರ 1, ಶಿವಮೊಗ್ಗ 3, ತುಮಕೂರು 7, ಉಡುಪಿ 1, ಉತ್ತರ ಕನ್ನಡ 1, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


