ಮಡಿಕೇರಿ: ಭಾರತ ಹಾಕಿ ತಂಡದ ಆಯ್ಕೆ ಸಮಿತಿಯನ್ನು ಹೊಸದಾಗಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಕೊಡಗಿನ ಮಾಜಿ ಹಾಕಿ ಆಟಗಾರ ವಿ.ಆರ್.ರಘುನಾಥ್ ಸ್ಥಾನ ಪಡೆದಿದ್ದಾರೆ.ಪುರುಷರ ಹಾಕಿ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಹರ್ಬಿಂದರ್ ಸಿಂಗ್ ಹಾಗೂ ಮಹಿಳಾ ತಂಡದ ಸಮಿತಿ ಅಧ್ಯಕ್ಷರಾಗಿ ಸೈಯದ್ ಅಲಿ ಅವರಿದ್ದಾರೆ. ಸದಸ್ಯರುಗಳಾಗಿ ಮೊಹಮ್ಮದ್ ರಿಯಾಜ್, ದಿಲೀಪ್ ಟರ್ಕಿ, ವಿ.ಆರ್.ರಘುನಾಥ್, ಆರ್.ಪಿ.ಸಿಂಗ್, ರಜನೀಶ್ ಮಿಶ್ರಾ, ಸರ್ದಾರ್ ಸಿಂಗ್, ಜಯದೀಪ್ ಕೌರ್, ಅಸುಂತ ಲಾಕ್ರಾ, ಸುನಿಂದು ಕೌರ್ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್ಈ ಹಿಂದೆ ಭಾರತ ಹಾಕಿ ತಂಡದ ಆಯ್ಕೆ ಸಮಿತಿಯಲ್ಲಿದ್ದ ಕೊಡಗಿನವರಾದ ಬಿ.ಸಿ.ಗೋವಿಂದ ಅವರು ಇದೀಗ ಮೆಂಬರ್ ಆಫ್ ಹಾಕಿ ಇಂಡಿಯಾ ಹೈಪರ್ ಫಾರ್ಮೆನ್ಸ್ ಅಂಡ್ ಡೆವಲಪ್‍ಮೆಂಟ್ ಕಮಿಟಿ ಹಾಗೂ ಹಾಕಿ ಇಂಡಿಯಾ ಮಾಸ್ಟರ್ಸ್ ಕಮಿಟಿಯಲಿದ್ದಾರೆ. ಇದೀಗ ಅಯ್ಕೆ ಸಮಿತಿಗೆ ವಿ.ಆರ್.ರಘುನಾಥ್ ಅಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ 2022: ಅಗ್ರ ವಿದೇಶಿ ಆಟಗಾರರು ಲೀಗ್‍ನ ಮೊದಲ ವಾರದಲ್ಲಿ ಲಭ್ಯವಿರಲ್ಲ






 Advertisement 




Sign in to your account
Username or Email Address


Password

 Remember Me


