ಧನುಷ್ ಜತೆಗೆ ವಿಚ್ಛೇದನದ ನಂತರ ರಜನೀಕಾಂತ್ ಪುತ್ರಿ ಐಶ್ವರ್ಯ ಆಸ್ಪತ್ರೆ ಸೇರಿಕೊಂಡಿದ್ದರು. ಕೋವಿಡ್ ಮತ್ತು ಇತರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ಗುಣಮುಖರಾಗಿದ್ದು, ಕೆಲವೇ ದಿನಗಳಲ್ಲೇ ಮತ್ತೆ ಅವರು ನಿರ್ದೇಶನ ಆರಂಭ ಮಾಡಲಿದ್ದಾರಂತೆ.ನಿರ್ದೇಶಕಿಯಾಗಿ ಹಲವು ಸಿನಿಮಾಗಳನ್ನು ಮಾಡಿರುವ ಐಶ್ವರ್ಯ, ಖಾಸಗಿ ಬದುಕಿನಲ್ಲಿ ಸಾಕಷ್ಟು ನೋವುಗಳನ್ನು ಉಂಡವರು. ಹಾಗಾಗಿ ಅವರು ಅನಿವಾರ್ಯವಾಗಿ ಮತ್ತೆ ಕೆಲಸಕ್ಕೆ ಇಳಿಯಬೇಕಿದೆ. ಎಲ್ಲ ಸಂಕಟಗಳನ್ನು ದಾಟಿಕೊಳ್ಳಲು ಮತ್ತೆ ನಿರ್ದೇಶನ ಮಾಡುವುದು ಸೂಕ್ತ ಎಂಬ ಸಲಹೆ ಬಂದ  ಹಿನ್ನೆಲೆಯಲ್ಲಿ ಅವರು ಹೊಸ ಕಥೆಯೊಂದನ್ನು ಕೈಗೆತ್ತಿಕೊಂಡಿದ್ದಾರಂತೆ.  ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್ಈಗಾಗಲೇ ಕಥೆ ರೆಡಿ ಮಾಡಿಕೊಂಡಿದ್ದು, ತಮಿಳಿನ ಖ್ಯಾತ ನಟ ಸಿಂಬು ಅವರ ಚಿತ್ರಕ್ಕೆ ಐಶ್ವರ್ಯ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ಕೆಲ ವರ್ಷಗಳಿಂದ ಸಿಂಬು ಸಿನಿಮಾ ರಂಗದಿಂದ ದೂರವಿದ್ದರು. ಈ ಸಿನಿಮಾದ ಮೂಲಕ ಅವರೂ ಚಿತ್ರೋದ್ಯಮಕ್ಕೆ  ಮರಳಲಿದ್ದಾರಂತೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್ಪತಿ ಧನುಷ್ ಅವರು ಸಿನಿಮಾದ ಮೂಲಕ ನಿರ್ದೇಶಕಿ ಆದವರು ಐಶ್ವರ್ಯ. ಆನಂತರ ಅವರು ವಾಯಿ ರಾಜ್ ವಾಯಿ ಸೇರಿದಂತೆ ಹಲವು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಐದು ವರ್ಷದಿಂದ ಯಾವುದೇ ಚಿತ್ರ ಮಾಡಿರಲಿಲ್ಲ.Sign in to your account
Username or Email Address


Password

 Remember Me


