ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2017-18 ರ ಬಜೆಟ್‍ನಲ್ಲಿ ಕಾಂಗ್ರೆಸ್ ಸುಳ್ಳು ಲೆಕ್ಕ ಹೇಳಿದೆ ಎಂದು ಬಿಜೆಪಿ ಶಾಸಕ ಕುಡಚಿ ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿಧಾನ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ 2017-18ರ ಬಜೆಟ್‍ನಲ್ಲಿ ಎರಡೂವರೆ ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ಸುಳ್ಳು ಲೆಕ್ಕವಾಗಿದ್ದು, ಅವರು ಯಾವುದೇ ಮನೆಗಳನ್ನು ಕಟ್ಟಿಲ್ಲ. ಇದರ ಬಗ್ಗೆ ನಾನು ಕೈ ಪಕ್ಷಕ್ಕೆ ಓಪನ್ ಚಾಲೆಂಜ್ ಹಾಕುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಸದನದಲ್ಲಿ ರಾಜೀವ್ ಅವರ ಓಪನ್ ಚಾಲೆಂಜ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಏನ್ ಚಾಲೆಂಜ್ ಮಾಡೋದು ನೀವು? ಚಾಲೆಂಜ್ ಮಾಡುವುದಾದರೆ ಬನ್ನಿ ಜನರ ಬಳಿ ಹೋಗೋಣ. ಮನೆ ಕಟ್ಟಿಸಿದೆವೋ ಇಲ್ಲವೋ ಅವರನ್ನೇ ಕೇಳೋನಾ ಬನ್ನಿ ಹೋಗೋಣ ಚಾಲೆಜ್ ಒಪ್ಕೋತೀರಾ? ಎಂದು ರಾಜೀವ್ ಅವರಿಗೆ ಮರು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್







 Advertisement 




Sign in to your account
Username or Email Address


Password

 Remember Me


